Sunday, September 13, 2026

BDA Apartments

ಐಎಂಎ ಕಂಪನಿಯಿಂದ ಕೋಟ್ಯಾಂತರ ರೂ. ವಂಚನೆ ಕೇಸ್: ಆಡಿಟರ್ ಪೊಲೀಸರ ವಶಕ್ಕೆ… BDA JK_Adv...
Home Crime ಐಎಂಎ ಕಂಪನಿಯಿಂದ ಕೋಟ್ಯಾಂತರ ರೂ. ವಂಚನೆ ಕೇಸ್:  ಆಡಿಟರ್ ಪೊಲೀಸರ ವಶಕ್ಕೆ…

ಐಎಂಎ ಕಂಪನಿಯಿಂದ ಕೋಟ್ಯಾಂತರ ರೂ. ವಂಚನೆ ಕೇಸ್:  ಆಡಿಟರ್ ಪೊಲೀಸರ ವಶಕ್ಕೆ…

ಬೆಂಗಳೂರು,ಜೂ,14,2019(www.justkannada.in): ರಾಜ್ಯಾದ್ಯಂತ ಸುದ್ದಿಯಾಗಿರುವ ಐಎಂಎ ಕಂಪನಿ ವಂಚನೆ ಪ್ರಕರಣ ಸಂಬಂಧ ಕಂಪನಿಯ ಅಡಿಟರ್ ನನ್ನ ಎಸ್ ಐಟಿ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಐಎಂಎ ಜ್ಯುವೆಲ್ಲರಿ ಕಂಪನಿ ಮಾಲೀಕ ಮನ್ಸೂರ್ ಖಾನ್ ಸಾವಿರಾರು ಜನರಿಗ ಕೋಟ್ಯಾಂತರ ರೂ ವಂಚನೆ ಮಾಡಿ ತಲೆಮರಿಸಿಕೊಂಡಿದ್ದು, ಹೂಡಿಕೆದಾರರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ ವಂಚನೆ ಪ್ರಕರಣ ಬೆಳಕಿಗೆ ಬಂದ ಬಳಿಕ ನಾಪತ್ತೆಯಾಗಿದ್ದ ಐಎಂಎ ಕಂಪನಿ ಅಡಿಟರ್  ಇಕ್ಬಾಲ್ ಖಾನ್ ನನ್ನ ಎಸ್ ಐಟಿ ತಂಡ ಬಂಧಿಸಿದೆ.

ಬೆಂಗಳೂರಿನ ನಿವಾಸದಲ್ಲಿ ಇಕ್ಬಲ್ ಖಾನ್ ನನ್ನ ವಶಕ್ಕೆ ಪಡೆಯಲಾಗಿದ್ದು ಇದೀಗ ಎಸ್ ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮನ್ಸೂರ್ ಖಾನ್ ಹೂಡಿಕೆದಾರರ ಹಣ ದೋಚಿ ದುಬೈಗೆ  ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.

Key words: IMACompany -Fraudcase –Auditor- arrested