ಐಎಂಎ ಬಹುಕೋಟಿ ವಂಚನೆ ಪ್ರಕರಣ: ಸಿಬಿಐನಿಂದ ಚಾರ್ಜ್ ಶೀಟ್ ಸಲ್ಲಿಕೆ…

ಬೆಂಗಳೂರು,ಅಕ್ಟೋಬರ್,17,2020(www.justkannada.in): ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಬಿಐ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.jk-logo-justkannada-logo

ಆರೋಪಿ ಮನ್ಸೂರ್ ಖಾನ್ ಸೇರಿ 28 ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಪೊಲೀಸ್ ಅಧಿಕಾರಿಗಳ ಹೆಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ ಎಂದು ಹೇಳಲಾಗಿದೆ.  ಪೊಲೀಸ್ ಅಧಿಕಾರಿಗಳು ತನಿಖೆ ನಡೆಸದೇ ಕೇಸ್ ಕ್ಲೋಸ್ ಮಾಡಿದ್ದಾರೆ. ರೆವಿನ್ಯೂ ಅಧಿಕಾರಿಗಳ ಜತೆ ಪೊಲೀಸರು ತನಿಖೆ ನಡೆಸದೆ ಪ್ರಕರಣ ಕ್ಲೋಸ್ ಮಾಡಿದ್ದಾರೆ.  ತನಿಖೆ ನಡೆಸದೆ ಕ್ಲೀನ್ ಚಿಟ್ ನೀಡಿ ಪ್ರಕರಣ ಮುಕ್ತಾಯ ಮಾಡಲಾಗಿದೆ. ಹೀಗಾಗಿ ಈ ದೊಡ್ಡ ಹಗರಣ ನಡೆದಿದೆ ಎಂದು ಸಿಬಿಐ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.ima-multi-crore-fraud-case-charge-sheet-submission-cbi

Key words:  IMA – multi-crore- fraud- case-Charge sheet- submission – CBI.