ಐಎಂಎ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಖಾನ್  ಮನೆ ಮೇಲೆ ಎಸ್ ಐಟಿ ದಾಳಿ ವೇಳೆ 303ಕೆ.ಜಿ ನಕಲಿ ಚಿನ್ನದ ಬಿಸ್ಕೆಟ್ ಪತ್ತೆ…

ಬೆಂಗಳೂರು,ಆ,7,2019(www.justkannada.in): ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಮಾಲೀಕ  ಆರೋಪಿ ಮನ್ಸೂರ್  ಖಾನ್ ಮನೆ ಮೇಲೆ ಎಸ್ ಐಟಿ ದಾಳಿ ನಡೆಸಿದ ವೇಳೆ ಸುಮಾರು 303 ಕೆಜಿ ನಕಲಿ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

 ಎಸ್‌ ಐ ಟಿ ಅಧಿಕಾರಿಗಳು ಶಾಂತಿನಗರದಲ್ಲಿರುವ  ಆರೋಪಿ ಮನ್ಸೂರ್ ಖಾನ್ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಪಾರ ಪ್ರಮಾಣದ ನಕಲಿ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ. ಕಟ್ಟಡದ ಕೊನೆ ಮಹಡಿಯಲ್ಲಿ ನಿರ್ಮಿಸಿದ್ದ ಈಜುಕೊಳದಲ್ಲಿ ಸಿಕ್ರೇಟ್ ಲಾಕರ್ ಮಾಡಿಸಿ ನಕಲಿ ಚಿನ್ನದ ಬಿಸ್ಕೆಟ್ ಅಡಗಿಸಿಟ್ಟಿದ್ದ ಎನ್ನಲಾಗಿದೆ.

303ಕೆಜಿಯ ಸುಮಾರು 5880 ನಕಲಿ ಚಿನ್ನದ ಬಿಸ್ಕೆಟ್ ಇದ್ದು ಇವುಗಳನ್ನ ಮನ್ಸೂರ್ ಖಾನ್ ಹೂಡಿಕೆದಾರರಿಗೆ ತೋರಿಸಿ ಅಸಲಿ ಚಿನ್ನ ಎಂದು ನಂಬಿಸುತ್ತಿದ್ದ. ಇದಕ್ಕೆ ಹೂಡಿಕೆದಾರರು ಮಾರುಹೋಗುತ್ತಿದ್ದರು ಎನ್ನಲಾಗಿದೆ. ಇನ್ನು ಸದ್ಯ ಐಎಂಎ ವಂಚನೆಯ ಪ್ರಮುಖ ಆರೋಪಿ ಮನ್ಸೂರ್ ಆಲಿಖಾನ್ ನ್ಯಾಯಾಂಗ ಬಂಧನದಲ್ಲಿದ್ದಾನೆ.

Key words: IMA -fraud –case-303 kg – Fake -gold biscuits- detected –SIT- raid