Friday, August 21, 2026

BDA Apartments

Home Crime ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಐಎಫ್ಎಸ್ ಅಧಿಕಾರಿ

ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಐಎಫ್ಎಸ್ ಅಧಿಕಾರಿ

 

ಬೆಂಗಳೂರು, ಸೆ.08, 2019 : ( www.justkannada.in news ) ನಗರದಲ್ಲಿ ಭಾನುವಾರ ಬೆಳಗ್ಗೆ ಐಎಫ್ಎಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅರಣ್ಯಭವನದಲ್ಲಿ ಕರ್ತವ್ಯ ನಿರ್ವಸುತ್ತಿದ್ದ ಐಎಫ್ಎಸ್ ಅಧಿಕಾರಿ ಅವತಾರ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವವರು.
ನಿನ್ನೆಯಷ್ಟೇ ಕೆಲಸಕ್ಕೆ ಆಗಮಿಸಿದ್ದ ಅವತಾರ್ ಸಿಂಗ್, ಇಂದು ಬೆಳಗ್ಗೆ ಬೆಂಗಳೂರಿನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಲಹಂಕ ಪ್ರೇಸ್ಟಿಜ್ ಮೌಂಟ್ ಕಾಲೋ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಯಲಹಂಕ ಪೊಲೀಸರು , ಡಿಸಿಪಿ ಬಿಮಾ ಶಂಕರ್ ಗುಳ್ಳೇದ್ ಭೇಟಿ ಪರಿಶೀಲನೆ ನಡೆಸಿದರು. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಐಎಫ್ ಎಸ್ ಅಧಿಕಾರಿ ಅವತಾರ್ ಸಿಂಗ್. ೦೧/೦೪/೧೯೬೭ ರಲ್ಲಿ ಹರಿಯಾಣದಲ್ಲಿ ಜನಿಸಿದ್ದರು. ಅವತಾರ್ ಸಿಂಗ್ ಬೆಂಗಳೂರಿನ ಅರಣ್ಯಭವನದಲ್ಲಿ ಅಪಾರ ಮುಖ್ಯ ಅರಣ್ಯ ಸಂರಕ್ಷಣಾ ‌ಅಧಿಕಾರಿಯಾಗಿ ಸೇವೆಸಲ್ಲಿಸ್ತಿದ್ರು.

key words : ifs-officer-avathar.singh-commits-suicide-in-aranya bhavan, malleswaram, bangalore-today-morning