ಜತೆಗಿದ್ದರು, ಎದುರುಬದುರಾದರೂ ಹಾಲಿ-ಮಾಜಿ ಡಿಸಿಎಂ ನಡುವೆ ಮಾತಿಲ್ಲ, ಕತೆ ಇಲ್ಲ

 

ಬೆಂಗಳೂರು, ಸೆ.08, 2019 : ( www.justkannada.in news ) ಒಂದೆ ಬಸ್ಸಿನಲ್ಲಿ ಇದ್ರು ಒಬ್ಬರನೊಬ್ಬರು ಮಾತನಾಡಿಸದ ಡಿಸಿಎಂ ಅಶ್ವಥ್ ನಾರಯಣ ‌ಹಾಗು ಸಚಿವ ಆರ್ ಅಶೋಕ್.

ಬಸ್ಸಿನ ಹಿಂಬದಿಯಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಜೊತೆ ಡಿಸಿಎಂ -1 ಅಶ್ವಥ್ ‌ನಾರಯಣ್ ಕುಳಿತಿದ್ರೆ, ಮುಂದೆ ಸಿಎಂ ‌ಜೊತೆಯಲ್ಲಿ ಸಚಿವ ಆರ್ ಅಶೋಕ್ ಕುಳಿತಿದ್ದರು.
ಬಸ್ಸು ಹತ್ತುವಾಗ ಎದುರು ಬದರಾದರೂ ಸಹ ಒಬ್ಬರನೊಬ್ಬರು ಮಾತನಾಡಿಸದ ಅಶೋಕ್ ‌ಹಾಗು ಅಶ್ವಥ್ ನಾರಾಯಣ್.
ಬರೀ ಬೊಮ್ಮಾಯಿ ಅವರನ್ನಷ್ಟೇ ಮಾತನಾಡಿಸಿ ತೆರಳಿದ ‌ಡಿಸಿಎಂ ಅಶ್ವಥ್ ನಾರಯಣ್. ಬೊಮ್ಮಾಯಿ ಕೈ ಕುಲುಕಿ, ಅವರನ್ನು ‌ಮಾತನಾಡಿಸಿದ ಅಶ್ವಥ್ ನಾರಾಯಣ್.
ಆದರೆ ‌ಅವರ ಪಕ್ಕದಲ್ಲೇ ಕುಳಿತಿದ್ದ ಅಶೋಕ್ ‌ರನ್ನು ಮಾತನಾಡಿಸದೇ ಹಾಗೆ ತೆರಳಿದ ಡಿಸಿಎಂ ‌ಅಶ್ವಥ್‌ ನಾರಯಣ್. ಈ ವೇಳೆ ಅಶ್ವಥ್ ‌ನಾರಾಯಣರನ್ನು ಮಾತನಾಡಿಸಲು ಮುಂದಾಗದ ಅಶೋಕ್.
ಒಂದೆ‌‌ ಬಸ್ಸಿನಲ್ಲಿ ‌ಹೋಗ್ತಿದ್ರು ಒಬ್ಬರೊ‌ನೊಬ್ಬರು ಮಾತನಾಡಿಸದ‌ ಡಿಸಿಎಂ ಅಶ್ವಥ್ ‌ನಾರಯಣ ‌ಹಾಗು‌ ಕಂದಾಯ ಸಚಿವ ಆರ್ ಅಶೋಕ್.

key words : bjp-cm-city-rounds-dcm-ashwath.narayan-ashok