Sunday, August 23, 2026

BDA Apartments

Home Front Page ಭಾರತದಲ್ಲಿ ಎಲ್ಲ ಜನರಿಗೆ 4ನೇ ಡೋಸ್ ಲಸಿಕೆ ನೀಡುವ ಚಿಂತನೆ ಶುರು

ಭಾರತದಲ್ಲಿ ಎಲ್ಲ ಜನರಿಗೆ 4ನೇ ಡೋಸ್ ಲಸಿಕೆ ನೀಡುವ ಚಿಂತನೆ ಶುರು

ಬೆಂಗಳೂರು, ಡಿಸೆಂಬರ್ 25, 2022 (www.justkannada.in): ಭಾರತದಲ್ಲಿ ಎಲ್ಲ ಜನರಿಗೆ 4ನೇ ಡೋಸ್ ಲಸಿಕೆ ಬಗ್ಗೆ ಚಿಂತನೆ ಆರಂಭವಾಗಿದೆ.

ಚೀನಾದಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ 4ನೇ ಡೋಸ್ ಲಸಿಕೆ ಬಗ್ಗೆ ಚಿಂತನೆ ನಡೆದಿದೆ.

ನಾಸಲ್ ವ್ಯಾಕ್ಸಿನ್ ಗೆ ಮ್ಯೂಕೋಸಲ್ ಇಮ್ಯುನಿಟಿ ಶ್ವಾಸಕೋಶ ಸೇರಿದಂತೆ ಅತಿಮುಖ್ಯ ಅಂಗಗಳಲ್ಲಿ ರೋಗನಿರೋಧಕ ಶಕ್ತಿ ಬೆಳೆಸುವ ಶಕ್ತಿಯಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ತಜ್ಞರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ.

ಮೂಗಿನ ಮೂಲಕ ಕೊಡುವ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳೂ ಇಲ್ಲ, ಹಾಗಾಗಿ ಮೂಗಿನ ಮೂಲಕ ಕೊಡುವ ಲಸಿಕೆಗಳಿಗೆ ಆದ್ಯತೆ ಕೊಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.