Friday, August 14, 2026

BDA Apartments

Home Front Page ಐಸಿಸಿ ಟೆಸ್ಟ್ ಕ್ರಿಕೆಟ್ ರ್‍ಯಾಂಕಿಂಗ್‌: ಕೊಹ್ಲಿ ನಂ.1

ಐಸಿಸಿ ಟೆಸ್ಟ್ ಕ್ರಿಕೆಟ್ ರ್‍ಯಾಂಕಿಂಗ್‌: ಕೊಹ್ಲಿ ನಂ.1

ದುಬೈ, ಜುಲೈ 24, 2019 (www.justkannada.in): ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟವಾಗಿದ್ದು ಟೆಸ್ಟ್‌ ಬ್ಯಾಟ್ಸ್‌ ಮನ್‌ ರ್‍ಯಾಂಕಿಂಗ್‌ನಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತೆ ನಂ. 1 ಸ್ಥಾನ ಅಲಂಕರಿಸಿದ್ದಾರೆ.

922 ಅಂಕಗಳೊಂದಿಗೆ ಕೊಹ್ಲಿ ಅಗ್ರಸ್ಥಾನ ಪಡೆದಿದ್ದಾರೆ. ನ್ಯೂಜಿಲ್ಯಾಂಡಿನ ಕೇನ್‌ ವಿಲಿಯಮ್ಸನ್‌ (913) ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಚೇತೇಶ್ವರ್‌ ಪೂಜಾರ 881 ಅಂಕ ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ.

ಆಲ್‌ರೌಂಡರ್‌ ರ್‍ಯಾಂಕಿಂಗ್‌ನಲ್ಲಿ ರವೀಂದ್ರ ಜಡೇಜ 3ನೇ ಸ್ಥಾನದಲ್ಲಿದ್ದಾರೆ. ತಂಡ ರ್‍ಯಾಂಕಿಂಗ್‌ನಲ್ಲಿ ಭಾರತ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡು ಬಲಿಷ್ಠ ತಂಡವೆಂದು ಮತ್ತೆ ಸಾಬೀತುಪಡಿಸಿದೆ. ಅಗ್ರ ಐದು ಸ್ಥಾನಗಳಲ್ಲಿ ಅನುಕ್ರಮವಾಗಿ ನ್ಯೂಜಿಲ್ಯಾಂಡ್‌ (2) ದಕ್ಷಿಣ ಆಫ್ರಿಕಾ (3)ಇಂಗ್ಲೆಂಡ್‌(4) ಆಸ್ಟ್ರೇಲಿಯ (5) ಇವೆ.