Sunday, August 23, 2026

BDA Apartments

Home Front Page ICC ODI Ranking: ನಂ.1 ಕೊಹ್ಲಿ, ನಂ.2 ರೋಹಿತ್

ICC ODI Ranking: ನಂ.1 ಕೊಹ್ಲಿ, ನಂ.2 ರೋಹಿತ್

ಬೆಂಗಳೂರು, ಜನವರಿ 28, 2021 (www.justkannada.in): ಏಕದಿನ ಪಂದ್ಯಗಳ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ವಿರಾಟ್ ಕೊಹ್ಲಿ 870 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, 2 ನೇ ಸ್ಥಾನದಲ್ಲಿ ರೋಹಿತ್ ಶರ್ಮಾ (842) ಅಂಕಗಳನ್ನು ಪಡೆದಿದ್ದಾರೆ.

ಬಾಬರ್ ಆಝಮ್ (837) ಮೂರನೇ ಸ್ಥಾನ, ನ್ಯೂಜಿಲೆಂಡ್ ತಂಡದ ಹಿರಿಯ ಬ್ಯಾಟ್ಸ್ ಮೆನ್ ರಾಸ್ ಟೇಲರ್ (818) ಹಾಗೂ ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ (791) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಜಸ್ ಪ್ರಿತ್ ಬುಮ್ರಾ 700 ಅಂಕಗಳೊಂದಿಗೆ ಮೂರನೇ ಶ್ರೇಯಾಂಕದಲ್ಲಿಯೇ ಮುಂದುವರೆದಿದ್ದಾರೆ. ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ (722) ಹಾಗೂ ಆಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ಉರ್ರಹ್ಮನ್ (701) ಅವರು ಕ್ರಮವಾಗಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ.