ರೋಹಿತ್ ಶರ್ಮಾಗೆ ವರ್ಷದ ಏಕದಿನ ಕ್ರಿಕೆಟಿಗ, ನಾಯಕ ವಿರಾಟ್ ಕೊಹ್ಲಿಗೆ ಸ್ಪಿರಿಟ್ ಆಫ್ ಕ್ರಿಕೆಟಿಗ ಪ್ರಶಸ್ತಿ….  

ಮುಂಬೈ,ಜ,15,2020(www.justkannada.in):  ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಶಸ್ತಿ ಘೋಷಣೆಯಾಗಿದ್ದು, ಭಾರತ ತಂಡದ ಹಿಟ್ ಮ್ಯಾನ್ ರೋಹಿತ್ ಶರ್ಮಾ ವರ್ಷದ ಏಕದಿನ ಕ್ರಿಕೆಟಿಗ  ಹಾಗೂ  ಟೀಂ ಇಂಡಿಯಾ ಕ್ಯಾಪ್ಟನ್  ವಿರಾಟ್ ಕೊಹ್ಲಿ ಸ್ಪಿರಿಟ್ ಆಫ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಐಸಿಸಿ ಪ್ರಕಟಿಸಿರುವ ವರ್ಷದ ಪ್ರಶಸ್ತಿ ಪಟ್ಟಿಯಲ್ಲಿ ರೋಹಿತ್ ಶರ್ಮ ವರ್ಷದ ಕ್ರಿಕೆಟಿಗನಾದರೆ, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಕ್ರಿಕೆಟ್ ಸ್ಫೂರ್ತಿ ಪ್ರಶಸ್ತಿ ಒಲಿದಿದೆ, ಇಂಗ್ಲೆಂಡ್ ವಿಶ್ವ ಚಾಂಪಿಯನ್ಸ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಬೆನ್‍ಸ್ಟ್ರೋಕ್ಸ್ ಗೆ ಐಸಿಸಿ ವರ್ಷದ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದಾರೆ.

ಐಪಿಎಲ್ ಬೃಹತ್ ಮೊತ್ತಕ್ಕೆ ಖರೀದಿಯಾಗಿರುವ ಪ್ಯಾಟ್ ಕಮಿನ್ಸ್ ವರ್ಷದ ಟೆಸ್ಟ್ ಬೌಲರ್ ಆಗಿ ಹೊರ ಹೊಮ್ಮಿದ್ದಾರೆ. ಭಾರತ ತಂಡದ ದೀಪಕ್ ಚಹರ್ ಟ್ವಿ-20 ಕ್ರಿಕೆಟ್ ನ ಯಶಸ್ವಿ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.

Key words: ICC Award of the Year-Rohit Sharma – ODI Cricketer – Virat Kohli -Spirit of Cricketer award