ನನ್ನ ಕುಟುಂಬದ ಬಗ್ಗೆ ಅನಗತ್ಯವಾಗಿ ಮಾತನಾಡುವುದು ಸರಿಯಲ್ಲ- ಡಿ.ರೂಪಾ ಅವರ ವಿರುದ್ಧ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಕಿಡಿ.

ಬೆಂಗಳೂರು,ಫೆಬ್ರವರಿ,20,2023(www.justkannada.in): ಐಎಎಎಸ್ ಮತ್ತು ಐಪಿಎಸ್ ಮಹಿಳಾ ಅಧಿಕಾರಿಗಳ ವಾರ್ ಮತ್ತಷ್ಟು ತಾರಕಕ್ಕೇರಿದ್ದು ಇದೀಗ ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಸುಧೀರ್ ರೆಡ್ಡಿ,  ರೂಹಿಣಿ ಸಿಂಧೂರಿಗೆ ಯಾವುದೇ ಪ್ರಚಾರ ಬೇಡ.ನಮ್ಮ ಕುಟುಂಬದ ಬಗ್ಗೆ ಅನಗತ್ಯವಾಗಿ ಮಾತನಾಡುವುದು ಸರಿಯಲ್ಲ. ನಾನು ಹುಟ್ಟಿದ್ದು ಇಲ್ಲೇ. ನಾನು ಕನ್ನಡಿಗ. ಆಂಧ್ರದಲ್ಲಿ ನಮ್ಮ ಸಂಬಂಧಿಕರು ಯಾರು ಇಲ್ಲ. ರೂಪ ಅನ್ನೋರು ಯಾರು..? ರೊಹಿಣಿ ಸಿಂಧೂರಿ ಸಾಮಾಜಿಕ ಜಾಲತಾಣ ಬಳಕೆ ಮಾಡುತ್ತಿಲ್ಲ. ಯಾವ ಯಾವ ಅಧಿಕಾರಿಗಳಿಗೆ ಫೋಟೊ ಕಳಿಸಿದ್ದಾರೆ ಮೊದಲು ಹೇಳಿ. ರೋಹಿಣಿ ಯಾರಿಗೆ ಫೋಟೊ ಕಳಿಸಿದ್ದಾರೆ ಹೇಳಿ. ಫೋಟೊಗಳನ್ನ ಹ್ಯಾಕ್ ಮಾಡಿ ತೆಗೆದುಕೊಂಡಿರಬಹುದು ಎಂದು ಕಿಡಿಕಾರಿದರು.

ನನ್ನ ತಂದೆ ಕಾಲದಿಂದಲೂ ನಾವು ರಿಯಲ್ ಎಸ್ಟೇಟ್ ಮಾಡುತ್ತಿದ್ದೇವೆ. ರೋಹಿಣಿ ಸಿಂಧೂರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹೊಟ್ಟೆ ಕಿಚ್ಚಿನಿಂದ ರೂಪಾ ಈ ರೀತಿ ಮಾಡುತ್ತಿದ್ದಾರೆ ಎಂದು ಸುಧೀರ್ ರೆಡ್ಡಿ ತಿಳಿಸಿದರು.

Key words: IAS-IPS-Officer-Rohini Sindhuri –D.Rupa.