Wednesday, August 19, 2026

BDA Apartments

Home Front Page ಯಾವ ಹೈಕಮಾಂಡ್ ನಿಂದಲೂ ನನಗೆ ನೋಟಿಸ್ ಬಂದಿಲ್ಲ- ಶಾಮನೂರು ಶಿವಶಂಕರಪ್ಪ.

ಯಾವ ಹೈಕಮಾಂಡ್ ನಿಂದಲೂ ನನಗೆ ನೋಟಿಸ್ ಬಂದಿಲ್ಲ- ಶಾಮನೂರು ಶಿವಶಂಕರಪ್ಪ.

ದಾವಣಗೆರೆ,ಅಕ್ಟೋಬರ್,6,10,2023(www.justkannada.in):  ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ  ಹೇಳಿಕೆ ಸಾಕಷ್ಟು ಸದ್ದು ಮಾಡುತ್ತಿದೆ. . ಸದ್ಯ ಈ ವಿಚಾರವಾಗಿ ಯಾವ ಹೈಕಮಾಂಡ್​​ನಿಂದಲೂ ನನಗೆ ನೋಟಿಸ್ ಬಂದಿಲ್ಲ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಸಿಎಂ ಸಿದ್ದರಾಮಯ್ಯ ಜೊತೆ ನಾನು ಮಾತನಾಡಿರುವುದನ್ನು ಹೇಳುವುದಕ್ಕೆ ಆಗುವುದಿಲ್ಲ. ಡಿಸೆಂಬರ್​​ 23, 24ರಂದು ಲಿಂಗಾಯತ ಮಹಾ ಅಧಿವೇಶನ ನಡೆಯುತ್ತದೆ. ಲಿಂಗಾಯತ ಮಹಾ ಅಧಿವೇಶನ ಶಕ್ತಿ ಪ್ರದರ್ಶನವಲ್ಲ. 10 ಲಕ್ಷಕ್ಕೂ ಹೆಚ್ಚು ಜನರು ಸೇರಿದರೆ ಅದು ಶಕ್ತಿ ಪ್ರದರ್ಶನ ಆಗಲಿದೆ ಎಂದರು.

ಸಮುದಾಯದ ಅಧಿಕಾರಗಳ ಪಟ್ಟಿ ಬಿಡುಗಡೆ ಬಗ್ಗೆ ಪ್ರಶ್ನೆ ಕೇಳಬೇಡಿ. ಜಾತಿ ಸಮೀಕ್ಷೆ ಬಗ್ಗೆ ಕೇಳಿದ್ದಕ್ಕೆ ಯಾವ ಜಾತಿ ಸಮೀಕ್ಷೆ ಇಲ್ಲ ಎಂದು  ಶಿವಶಂಕರಪ್ಪ ತಿಳಿಸಿದರು.

Key words: I have- not received – notice – high command – Shamanur Shivshankarappa.