ನನಗೆ ಸಚಿವ ಸ್ಥಾನದ ಅವಶ್ಯಕತೆ ಇಲ್ಲ: ಮಂತ್ರಿ ಮಾಡೋದು ಬೇಡ ಎಂದ್ರು ಶಾಸಕ ಬಸವರಾಜ ರಾಯರೆಡ್ಡಿ

ಕೊಪ್ಪಳ,ಆಗಸ್ಟ್,1,2023(www.justkannada.in): ನನಗೆ  ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಬೇಜಾರಿಲ್ಲ. ಸಚಿವ ಸ್ಥಾನದ ಅವಶ್ಯಕತೆಯೂ ನನಗೆ ಇಲ್ಲ, ಮುಂದೆ ಮಂತ್ರಿ ಮಾಡೋದು ಕೂಡ ಬೇಡ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ, ಸಿಎಂ ಸಿದ್ಧರಾಮಯ್ಯ ಅವರು  ನನಗೆ ಕ್ಯಾಬಿನೆಟ್ ದರ್ಜೆ ಸ್ಥಾನ ನೀಡಲು ರೆಡಿ ಇದ್ದರು. ಆದರೆ ನಾನೇ ಬೇಡ ಅಂದಿದ್ದೇನೆ, ಇದರಿಂದ ನಮಗೆ ಯಾವುದೇ ಬೇಜಾರಿಲ್ಲ ಎಂದರು.

ಸಚಿವರ ವಿರುದ್ದ ಶಾಸಕರ ಪತ್ರ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಸವರಾಜ ರಾಯರೆಡ್ಡಿ, ಪತ್ರ ಬರೆದಿದ್ದು ಶಾಸಕರು- ಸಚಿವರ ಮಧ್ಯೆ ಸಮನ್ವಯ ಆಗಲಿ ಅಂತ. ಕಲಬುರ್ಗಿಯಲ್ಲಿ ಬಿ.ಆರ್.ಪಾಟೀಲ್ ಪ್ರಿಯಾಂಕ್ ಖರ್ಗೆ ಮಧ್ಯೆ ಸಮನ್ವಯ ಕೊರತೆಯಾಗಿರಬಹುದು ಅದು ನಂಗೆ ಗೊತ್ತಿಲ್ಲ. ಅಲ್ಲಿನ ಶಾಸಕ ಅಜಯ್ ಸಿಂಗ್ ಕೂಡಾ ಸಹಿ ಮಾಡಿದ್ದರು. ಆದರೆ ಅವರಿಗೆ ಮುನಿಸಿದೆ ಎನ್ನೋದು ಗೊತ್ತಿಲ್ಲ. ಬಿ.ಆರ್.ಪಾಟೀಲ್ ಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತ ಬೇಜಾರಿಲ್ಲ. ಅವರಿಗೆ ಗೌರವ ಸಿಕ್ತಿಲ್ಲ ಅಂತ ಬೇಜಾರಿದೆ ಎಂದರು.

Key words: I don’t -need – minister’s post- MLA -Basavaraja Rayareddy