Saturday, August 8, 2026

BDA Apartments

Home Front Page ಕಾಂಗ್ರೆಸ್ ಗೆ ನಿಖಿಲ್ ಗಿಂತ ನಾನೇ ದೊಡ್ಡ ಟಾರ್ಗೆಟ್- ಕೇಂದ್ರ ಸಚಿವ ಹೆಚ್ ಡಿಕೆ

ಕಾಂಗ್ರೆಸ್ ಗೆ ನಿಖಿಲ್ ಗಿಂತ ನಾನೇ ದೊಡ್ಡ ಟಾರ್ಗೆಟ್- ಕೇಂದ್ರ ಸಚಿವ ಹೆಚ್ ಡಿಕೆ

ನ್ನಪಟ್ಟಣ,ಅಕ್ಟೋಬರ್,30,2024 (www.justkannada.in):  ಕಾಂಗ್ರೆಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ಟಾರ್ಗೆಟ್ ಅಲ್ಲ, ನಿಖಿಲ್ ಗಿಂತ ನಾನೇ ದೊಡ್ಡ ಟಾರ್ಗೆಟ್ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನುಡಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿಕೆ,  ಉಪ ಚುನಾಣೆಯಲ್ಲಿ ನಿಖಿಲ್ ಸೋಲಿಸಲು ಕಾಂಗ್ರೆಸ್ ದೊಡ್ಡ ಕುತಂತ್ರ  ನಡೆಸಿದೆ. ನಿಖಿಲ್ ಸೋತರೆ ನನ್ನ ಮುಂದಿನ ಬೆಳವಣಿಗೆ ಕುಗ್ಗಿಸಬಹುದು ಎಂಬುದು ಅವರ ಲೆಕ್ಕಾಚಾರ. ನಾನು ಕೇಂದ್ರ ಮಂತ್ರಿಯಾಗಿರುವುದನ್ನು ಅವರು ಸಹಿಸುತ್ತಿಲ್ಲ. ಹೀಗಾಗಿ ರಾಜಕೀಯವಾಗಿ ನನ್ನನ್ನು ಮುಗಿಸಬೇಕೆಂದು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಕಳೆದ ವಿಧಾನಸಭೆ ಚುನಾವಣೆಯಿಂದಲೇ ಜೆಡಿಎಸ್ ಪಕ್ಷವನ್ನು ಮುಗಿಸಲು ಷಡ್ಯಂತ್ರ ಮಾಡಿ 19 ಸ್ಥಾನಕ್ಕೆ ಜೆಡಿಎಸ್ ಇಳಿಸಿದರು. ಅಲ್ಲದೆ ಶಾಸಕರು ಕಾಂಗ್ರೆಸ್‌ ಗೆ ಬರುತ್ತಾರೆ ಎಂದು ಅಪಪ್ರಚಾರ ಮಾಡಿದರು. ಆದರೆ, ಯಾರೊಬ್ಬರನ್ನೂ ಕಾಂಗ್ರೆಸ್ ನವರು ಅಲುಗಾಡಿಸಲು  ಸಾಧ್ಯವಾಗಲಿಲ್ಲ ಎಂದು  ಹೆಚ್ ಡಿಕೆ ಗುಡುಗಿದರು.

Key words: I am, target,  Congress, Union Minister, HDK