ನಾನು ಅಂಡಮಾನ್ ಜೈಲಿಗೆ ಹೋಗಿ ಬರಲು ಸಿದ್ಧ- ಸಿಟಿ ರವಿಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್.

ಬೆಳಗಾವಿ,ಡಿಸೆಂಬರ್,8,2023(www.justkannada.in): ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೊ ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ  ಫೋಟೊ ತೆಗೆಯುವ ಹೇಳಿಕೆಗೆ ನಾನು ಈಗಲೂ ಬದ್ದ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ನನ್ನ ವಿಚಾರ ಮತ್ತು ಸಿದ್ದಾಂತ ಸರಿಯಿದೆ. ನಾನು ಬಸವತತ್ವ ನಾರಾಯಣಗುರು ತತ್ವ ಪಾಲಿಸುವವನು.  ಸಾವರ್ಕರ್ ಬ್ರೀಟಿಷರಿಂದ  ಮಾಶಾಸನ ಪಡೆಯುತ್ತಿದ್ದರು ಎಂದರು.

ನನಗೆ ಸಿಟಿ ರವಿ ಅಂಡಮಾನ್ ಗೆ ಹೋಗಿ ಬನ್ನಿ ಅಂತಾರೆ.  ನಾನು ಅಂಡಮಾನ್ ಜೈಲಿಗೆ ಬರಲು ಸಿದ್ದ ಆದರೆ ಈಗಲೇ ಹೋಗಲು ಆಗಲ್ಲ.  ಬರಗಾಲ ಮುಗಿಯಲಿ.  ಬರಗಾಲ ಮುಗಿದ ಬಳಿಕ ಅಂಡಮಾನ್ ಗೆ ಹೋಗುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದರು.

Key words: I am -ready – go – Andaman Jail –Minister- Priyank Kharge- CT Ravi