ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಅವಕಾಶ ಕೊಟ್ಟರೇ ಸ್ವೀಕರಿಸುತ್ತೇನೆ – ಸಿ.ಪಿ ಯೋಗೇಶ್ವರ್…

ಬೆಂಗಳೂರು,ನವೆಂಬರ್,28,2020(www.justkannada.in):  ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಚಿವ ಸ್ಥಾನಕ್ಕಾಗಿ ಒತ್ತಡವನ್ನೂ ಹಾಕಿಲ್ಲ ಎಂದು ಬಿಜೆಪಿ ಎಂಎಲ್ ಸಿ ಸಿ.ಪಿ ಯೋಗೇಶ್ವರ್ ಸ್ಪಷ್ಟನೆ ನೀಡಿದರು.I didn't knew CM BSY will think so cheaply - KPCC President D.K. Shivakumar

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿ.ಪಿ ಯೋಗೇಶ್ವರ್, ನಾನು ನನ್ನ ಪಾಡಿಗೆ ಇದ್ದೇನೆ. ನಾನು ಯಾವುದೇ ಒತ್ತಡ ಹಾಕಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆದರೆ ಸಚಿವ ಸ್ಥಾನ ಕೊಡುವುದು ಪಕ್ಷದ ವರಿಷ್ಟರಿಗೆ ಬಿಟ್ಟಿದ್ದು. ಅವಕಾಶ ಕೊಟ್ಟರೇ ಸ್ವೀಕರಿಸುತ್ತೇನೆ. ಇಲ್ಲದಿದ್ದರೇ ತೊಂದರೆ ಇಲ್ಲ.  ನನಗೆ ಈಗಾಗಲೇ ಬಿಜೆಪಿ ವಿಧಾನಪರಿಷತ್ ಸ್ಥಾನ ನೀಡಿದೆ ಎಂದರು.I am -not aspiring - ministerial position-mlc-  C. P. Yogeshwar.

ಯಾಕೋ ನನ್ನ ಹಿಂದೆಯೇ ಕಾಂಟ್ರವರ್ಸಿ ಸುತ್ತಿ ಬರುತ್ತಿದೆ. ನಾನು ಯಾವುದೇ ವಿವಾದ ಮಾಡಿಕೊಳ್ಳಲು ಇಷ್ಟವಿಲ್ಲ. ಇನ್ನು ರಮೇಶ್ ಜಾರಕಿಹೊಳಿ  ಅವರನ್ನ ಆಗಾಗ ಭೇಟಿ ಮಾಡುತ್ತೇನೆ. ಸಭೆಗೆ ಹೋಗ್ತೀನಿ ಎಂದು ಸಿ.ಪಿ ಯೋಗೇಶ್ವರ್ ತಿಳಿಸಿದರು.

Key words: I am -not aspiring – ministerial position-mlc-  C. P. Yogeshwar.