Tuesday, August 25, 2026

BDA Apartments

Home Crime ಬುದ್ದಿವಾದ ಹೇಳಿದಕ್ಕೆ ಪತ್ನಿ ಮೇಲೆಯೇ ಸಾಂಬರ್ ಸುರಿದು ವಿಕೃತಿ ಮೆರೆದ ಪತಿ

ಬುದ್ದಿವಾದ ಹೇಳಿದಕ್ಕೆ ಪತ್ನಿ ಮೇಲೆಯೇ ಸಾಂಬರ್ ಸುರಿದು ವಿಕೃತಿ ಮೆರೆದ ಪತಿ

ಮೈಸೂರು,ಮಾರ್ಚ್, 24,2025 (www.justkannada.in):  ಕುಡಿತವನ್ನು ಬಿಟ್ಟು ಕೆಲಸಕ್ಕೆ ಹೋಗು ಎಂದು ಬುದ್ದಿವಾದ ಹೇಳಿದ ಪತ್ನಿಯ ಮೇಲೆಯೇ ಪತಿಯೊಬ್ಬ ಸಾಬರ್ ಸುರಿದು ವಿಕೃತಿ ಮೆರೆದ ಘಟನೆ ಮೈಸೂರಿನ  ಹಿನಕಲ್ ನಲ್ಲಿ ನಡೆದಿದೆ.

ಪತಿ ರಾಜು ಎಂಬಾತನೇ ವಿಕೃತಿ ಮೆರೆದಿದ್ದು ಘಟನೆಯಲ್ಲಿ ಪತ್ನಿ ಮಂಗಳಮ್ಮ ಪುತ್ರಿ ಸುಮತಿ ಗಾಯಗೊಂಡಿದ್ದು, ಕೆಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಂಜನಗೂಡು ನಿವಾಸಿಗಳಾದ ರಾಜು ಹಾಗೂ ಮಂಗಳಮ್ಮ ಜೀವನೋಪಾಯಕ್ಕಾಗಿ 4 ತಿಂಗಳ ಹಿಂದೆ ಮೈಸೂರಿಗೆ ಬಂದು ಹಿನಕಲ್ ನಲ್ಲಿ ನೆಲೆಸಿದ್ದರು. ಈ ಮಧ್ಯೆ ಪತಿ ರಾಜು ಕುಡಿತದ ಚಟಕ್ಕೆ ದಾಸನಾಗಿದ್ದು ಕೆಲಸಕ್ಕೂ ಸರಿಯಾಗಿ ಹೋಗುತ್ತಿರಲಿಲ್ಲ.

ಈ ಮಧ್ಯೆ ಎರಡು ದಿನಗಳ ಹಿಂದೆ ಪತ್ನಿ ಮಂಗಳಮ್ಮ ಕೆಲಸ ಮುಗಿಸಿ  ಮನೆಗೆ ಬಂದ ವೇಳೆ ರಾಜು ಮನೆಯಲ್ಲೇ ಕುಡಿದು ಬಿದ್ದಿದ್ದ. ಈ ಸಮಯದಲ್ಲಿ ಕೆಲಸಕ್ಕೆ ಹೋಗಲಿಲ್ಲ ಅಂದ್ರೆ ಸಂಸಾರ ಹೇಗೆ ನಡೆಯುತ್ತೆ.ಕುಡಿತ ಬಿಟ್ಟು ಕೆಲಸಕ್ಕೆ ಹೋಗು ಎಂದು ಪತಿ ರಾಜುಗೆ  ಪತ್ನಿ ಮಂಗಳಮ್ಮ ಬುದ್ದಿವಾದ ಹೇಳಿದ್ದಾರೆ.

ಇದಕ್ಕೆ ಕೋಪಗೊಂಡ ರಾಜು ನನ್ನ ಸಂಪಾದನೆಯಲ್ಲಿ ನಾನು ಕುಡೀತೀನಿ. ನೀನು ಇದ್ದರೇ ತಾನೆ ಕೆಲಸಕ್ಕೆ ಹೋಗು ಅಂತೀಯಾ ಎಂದು ಒಲೆ ಮೇಲೆ ಕುದಿಯುತ್ತಿದ್ದ ಬಿಸಿ ಸಾಂಬಾರ್ ಎತ್ತಿ ಮಂಗಳಮ್ಮ ಮೇಲೆ ಸುರಿದಿದ್ದಾನೆ .ಈ ವೇಳೆ ಮಗಳು ಸುಮತಿ ಸಹ ಇದ್ದು.ಇಬ್ಬರಿಗೂ ಸುಟ್ಟಗಾಯಗಳಾಗಿವೆ. ಇಬ್ಬರನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Husband, sambar, wife, mysore