ಪತಿ ಕಿರುಕುಳ ತಾಳಲಾರದೆ ಹಿನ್ನೆಲೆ ಗಾಯಕಿ ಆತ್ಮಹತ್ಯೆಗೆ ಶರಣು…

ಬೆಂಗಳೂರು,ಫೆ,17,2020(www.justkannada.in): ಪತಿಯ ಕುರುಕುಳ ತಾಳಲಾರದೆ ಹಿನ್ನೆಲೆ ಗಾಯಕಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಮಾಳಗಾಳದಲ್ಲಿ ಈ ಘಟನೆ ನಡೆದಿದೆ. ಸುಶ್ಮಿತಾ ಆತ್ಮಹತ್ಯೆಗೆ ಶರಣಾದ ಹಿನ್ನೆಲೆ ಗಾಯಕಿ.  ಒಂದುವರೆ ವರ್ಷದ ಹಿಂದೆ ಶರತ್ ಕುಮಾರ್ ಎಂಬುವವರಿಗೆ ಸುಸ್ಮಿತಾ ಅವರನ್ನ ಮದುವೆ ಮಾಡಿಕೊಡಲಾಗಿತ್ತು. ಮಾಳಗಾಳದ ತಾಯಿ ಮನೆಯಲ್ಲಿ ಸುಶ್ಮಿತಾ  ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆದಿದ್ದಾರೆ.

ತಮ್ಮ ಡೆತ್ ನೋಟ್ ನಲ್ಲಿ ಪತಿ ಹಾಗೂ ಅವರ ಕುಟುಂಬದ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಹೀಗಾಗಿ ಪತಿ ಶರತ್ ಕುಮಾರ್ ವರದಕ್ಷಿಣೆ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಕನ್ನಡ ಸಿನಿಮಾ, ಧಾರಾವಾಹಿ, ಸ್ಟೇಜ್ ಶೋಗಳಲ್ಲಿ  ಸುಶ್ಮಿತಾ ಅವರು ಹಾಡುತ್ತಿದ್ದರು. ಹಾಲು ತುಪ್ಪ’, ‘ಶ್ರೀ ಸಾಮಾನ್ಯ’ ಮುಂತಾದ ಚಿತ್ರಗಳ ಹಾಡುಗಳಿಗೆ ಸುಶ್ಮಿತಾ ದನಿಯಾಗಿದ್ದರು.

ಇನ್ನು ಈ ಕುರಿತು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  husband – harassment – Background singer- surrenders – suicide-bangalore