ಕಡವೆ ಬೇಟೆಯಾಡಿ ಮಾಂಸ‌ ಬಚ್ಚಿಟ್ಟಿದ್ದ ವ್ಯಕ್ತಿ ಅರೆಸ್ಟ್…

ಮೈಸೂರು,ಡಿ,18,2019(www.justkannada.in): ಕಡವೆ ಬೇಟೆಯಾಡಿ ಮಾಂಸ‌ ಬಚ್ಚಿಟ್ಟಿದ್ದ ವ್ಯಕ್ತಿಯನ್ನ ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ.

ಮೈಸೂರಿನಲ್ಲಿ ಹುಣಸೂರಿನ ಲಕ್ಷ್ಮೀಪುರ ಗ್ರಾಮದ ಆನೆಚೌಕೂರಿನಲ್ಲಿ ಈ ಘಟನೆ ನಡೆದಿದೆ. ಸ್ವಾಮಿ ಎಂಬಾತ ಬಂಧಿತ ವ್ಯಕ್ತಿ. ಈತ ಕಡವೆಯನ್ನ ಬೇಟೆಯಾಡಿ ಸುಮಾರು 80 ಕೆಜಿ ಮಾಂಸವನ್ನ ತಂಬಾಕಿನ ಬ್ಯಾರನ್‌ನಲ್ಲಿ  ಬಚ್ಚಿಟ್ಟಿದ್ದನು. ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಅರಣ್ಯ ಸಿಬ್ಬಂದಿಗಳು ಕಡವೆ ಮಾಂಸ, ತಲೆ, ಒಂದು ಮಚ್ಚು ವಶಕ್ಕೆ ಪಡೆದಿದ್ದಾರೆ.

ಇನ್ನು ಪರಾರಿಯಾಗಿರುವ ನಾಲ್ವರ ಶೋಧಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ.

Key words: hunusur- Arrest – man – hunted -hid -meat.