ಸಿಎಂ ಬಿಎಸ್ ವೈ ಭಾಗಿಯಾಗುವ ಕಾರ್ಯಕ್ರಮದಲ್ಲಿ ‘ಉರಗ’ ಪತ್ತೆ …

ಹುಬ್ಬಳ್ಳಿ,ಡಿ,18,2019(www.justkannada.in):  ಸಿ ಎಂ ಯಡಿಯೂರಪ್ಪ ಅವರು ಹುಬ್ಬಳ್ಳಿಗೆ  ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ. ರಾಜ್ಯದ ಸಿ‌ ಎಂ ಬರ್ತಿದ್ದಾರೆ ಎಂದರೆ ಸ್ಟೇಜ್ ದೊಡ್ಡಮಟ್ಟದಲ್ಲಿ ತಯಾರಿ ನಡೆಯುತ್ತಿತ್ತು. ಆದರೆ ಅಲ್ಲಿ ಒಬ್ಬ ಭಯತೋರಿಸುವ ಉರಗ ಕಾಣಿಸಿಕೊಂಡಿದೆ.

ಹೌದು ಹುಬ್ಬಳ್ಳಿ ನಗರದ ರಾಜ್ಯ ಹೆದ್ದಾರಿ – 73ರ ಶ್ರೀ ಕಾಡಸಿದ್ದೇಶ್ವರ ಕಾಲೇಜಿನಿಂದ ತೋಳನಕೆರೆಯವರೆಗೆ ನಿರ್ಮಿಸಲಾಗಿರುವ ಟೆಂಡರ್ SURE ರಸ್ತೆಯನ್ನು  ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಸಂಜೆ 5 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ.

ನಗರದ ಚೇತನಾ ಕಾಲೇಜ ಹತ್ತಿರದ ಮೈದಾನಲ್ಲಿ ಬೃಹತ್ತಾಕಾರದಲ್ಲಿ ಸ್ಟೇಜ್ ಮಾಡುತ್ತಿರುವ ಸಂದರ್ಭದಲ್ಲಿ ಒಂದು ಟೇಬಲ್ ದಲ್ಲಿ ಕೆರೆ ಹಾವು ಕಾಣಿಸಿಕೊಂಡಿದೆ. ಈ ವೇಳೆ ಸ್ನೇಕ್ ಸಂಗಮೇಶ ಅವರನ್ನು ಕರೆಯಿಸಿ ಆ ಹಾವನ್ನು ಹಿಡಿಸಿ ಕಾರ್ಯಕ್ರಮದ ಸಿದ್ದತೆಯನ್ನು ಮುಂದುವರೆಸಿದರು.

Key words: hubbli-cm bs yeddyurappa- program- snake