Friday, August 14, 2026

BDA Apartments

Home Front Page ಮಾಜಿ ಸಚಿವ ಜಿ.ಟಿ ದೇವೇಗೌಡರ  ನಿವಾಸಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ ಹುಣಸೂರು ನೂತನ ಶಾಸಕ...

ಮಾಜಿ ಸಚಿವ ಜಿ.ಟಿ ದೇವೇಗೌಡರ  ನಿವಾಸಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ ಹುಣಸೂರು ನೂತನ ಶಾಸಕ ಹೆಚ್.ಪಿ ಮಂಜುನಾಥ್…

ಮೈಸೂರು,ಡಿ,11,2019(www.justkannada.in):  ಹುಣಸೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ವಿರುದ್ದ ಗೆಲುವು ಸಾಧಿಸಿ ಕಾಂಗ್ರೆಸ್ ನೂತನ ಶಾಸಕರಾಗಿ ಆಯ್ಕೆಯಾಗಿರುವ ಹೆಚ್.ಪಿ ಮಂಜುನಾಥ್ ಇಂದು ಮಾಜಿ ಸಚಿವ ಜಿ ಟಿ ದೇವೇಗೌಡ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.

ನಗರದ ವಿಜಯ ನಗರದಲ್ಲಿರುವ ಮಾಜಿ ಸಚಿವ ಜಿ.ಟಿ ದೇವೇಗೌಡರ ನಿವಾಸಕ್ಕೆ ನೂತನ ಶಾಸಕ ಹೆಚ್.ಪಿ ಮಂಜುನಾಥ್  ಪತ್ನಿ ಸುಪ್ರಿಯಾ ಜೊತೆ ಭೇಟಿ ನೀಡಿದರು. ನಂತರ ಉಭಯ ಕುಶಲೋಪರಿ ವಿಚಾರಿಸಿದರು. ಉಪಚುನಾವಣೆಗೆ ಮುನ್ನ ಹುಣಸೂರಿನಲ್ಲಿ ಹೆಚ್.ಪಿ ಮಂಜುನಾಥ್ ಗೆಲ್ಲುತ್ತಾರೆ ಎಂದು ಜಿಟಿ ದೇವೇಗೌಡರು ಭವಿಷ್ಯ ನುಡಿದಿದ್ದರು.

ಈ ನಡುವೆ ಉಪಚುನಾವಣೆ ವೇಳೆ  ಜಿಟಿ ದೇವೇಗೌಡರ ಪುತ್ರ ಹರೀಶ್ ಗೌಡ ಹೆಚ್.ಪಿ  ಮಂಜುನಾಥ್ ಬೆಂಬಲಕ್ಕೆ ನಿಂತಿದ್ದರು. ಹೀಗಾಗಿ ಜಿ.ಟಿ ದೇವೇಗೌಡರನ್ನ ಭೇಟಿಯಾಗಿ ಅವರಿಗೆ ಹಾರಹಾಕಿ ಹೆಚ್.ಪಿ ಮಂಜುನಾಥ್ ಗೌರವ ಸಲ್ಲಿಸಿದರು.

Key words: Hunsur MLA -HP Manjunath- visit – former minister -GT Deve Gowda- residence