ಹುಣಸೂರು ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ: ಗೆದ್ದು ಮಂತ್ರಿಯಾಗ್ತೇನೆ- ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿಕೆ…

ನವದೆಹಲಿ,ನ,13,2019(www.justkannada.in): ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೆ ಅನರ್ಹ ಶಾಸಕರ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಈ ನಡುವೆ ಹುಣಸೂರು ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿಯಾಗುತ್ತೇನೆ. ಗೆದ್ದು ಮಂತ್ರಿಯಾಗುತ್ತೇನೆ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ನವದೆಹಲಿಯಲ್ಲಿ ಇಂದು ಮಾತನಾಡಿದ ಅನರ್ಹ ಶಾಸಕ ಹೆಚ್.ವಿಶ್ವನಾಥ್, ಕ್ಷೇತ್ರದಲ್ಲಿ ಓಡಾಡಿದವರೆಲ್ಲಾ ಅಭ್ಯರ್ಥಿಯಾಗಲ್ಲ. ನಾನೇ ಹುಣಸೂರು ಕ್ಷೇತ್ರದ ಅಭ್ಯರ್ಥಿಯಾಗುತ್ತೇನೆ.  ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗುತ್ತೇನೆ ಎಂದು ತಿಳಿಸಿದರು.

ಹಾಗೆಯೇ ರಮೇಶ್ ಜಾರಕಿಹೊಳಿ ನಮ್ಮ ಲೀಡರ್. ಅವರು ಹೇಳಿದಂತೆ ಎಲ್ಲವೂ ನಡೆಯಲಿದೆ. ಬಿಜೆಪಿಗೆ ಬರುವಂತೆ ಸಂತೋಷ್ ಮನವಿ ಮಾಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಎಲ್ಲರೂ ಸಭೆ ಸೇರುತ್ತೇವೆ. ಸಭೆಯಲ್ಲಿ ಬಿಜೆಪಿ ಸೇರ್ಪಡೆ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

Key words: hunsur-by-election-candidate   -disqualified MLA -H.Vishwanath