ನೂರಾರು ಎಕರೆ ಸರ್ಕಾರಿ ಜಮೀನು ಕಬಳಿಸಿರುವ ನಿನಗೆ ನಾಚಿಕೆ ಇದ್ಯಾ-ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಮಾಜಿ ಶಾಸಕ ವಾಗ್ದಾಳಿ…..

ಕೋಲಾರ,ಜ,11,2020(www.justkannada.in): ವಿಧಾನಸೌಧದಲ್ಲಿ ನಾನು ಸಾಚಾ ಬಡವ ಅಂತಾ ಮಾತನಾಡ್ತೀಯಾ. ನೂರಾರು ಎಕರೆ ಸರ್ಕಾರಿ ಜಮೀನು ಕಬಳಿಸಿರುವ ನಿನಗೆ ನಾಚಿಕೆ ಇದ್ಯಾ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ವಾಗ್ದಾಳಿ ನಡೆಸಿದರು.

ಕೋಲಾರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೆಂಕಟಶಿವಾರೆಡ್ಡಿ, ತಾನು ಬಹಳ ಸರಳ ಜೀವನ ನಡೆಸುತ್ತಿದ್ದೇನೆ, ಬಾಡಿಗೆ ಮನೆಯಲ್ಲಿದ್ದೇನೆ ಎಂದು ರಮೇಶ್ ಕುಮಾರ್ ಸುಳ್ಳು ಹೇಳುತ್ತಿದ್ದಾರೆ. ರಮೇಶ್ ಕುಮಾರ್ ಅವರದ್ದು ಐಷಾರಾಮಿ ಜೀವನ. ಪುತ್ರನ ಹೆಸರಲ್ಲಿ ಬೆಂಗಳೂರಿನ ಥಣಿಸಂದ್ರ ಹೆಗಡೆನಗರದಲ್ಲಿ ಕೋಟ್ಯಾಂತರ ರೂ ಮೌಲ್ಯದ ಮನೆ ನಿರ್ಮಾಣ ಮಾಡಿದ್ದಾರೆ. ಇಂದಿರಾ ನಗರ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಿದ್ದಾರೆ. ಬಡವರ ರಕ್ತ ಹೀರಿ, ವಂಚನೆ ಮಾಡಿಕೊಂಡು ಜೀವನ ಮಾಡುತ್ತಿರುವ ನಿನಗೆ ನಾಚಿಕೆಯಾಗಲ್ವ? ಎಂದು ರಮೇಶ್ ಕುಮಾರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ನನ್ನ ಆರೋಪ ಸುಳ್ಳಾದರೇ ಗಲ್ಲಿಗೇರಿಸಲಿ ಎಂದು ಸವಾಲು ಹಾಕಿದ್ದಾರೆ.

ಹಾಗೆಯೇ ಅತ್ತಿಕೊಂಟೆ ಕೊಲೆ ಪ್ರಕರಣದಲ್ಲಿ ರಮೇಶ್ ಕುಮಾರ್ 11ನೇ ಆರೋಪಿಯಾಗಿದ್ದರು. ಅಧಿಕಾರವನ್ನು ಬಳಸಿಕೊಂಡು ಬೆದರಿಕೆ ಹಾಕಿ ಆ ಪ್ರಕರಣಗಳಲ್ಲಿ ಬಿ ರಿಪೋರ್ಟ್​ ಹಾಕಿಸಿಕೊಂಡಿದ್ದಾರೆ ಎಂದು ವೆಂಕಟಶಿವಾರೆಡ್ಡಿ ಆರೋಪ ಮಾಡಿದ್ದಾರೆ.

Key words: hundreds – acres -government land- Occupied-former MLA- former Speaker -Ramesh Kumar.