ಅಂಜನಾದ್ರಿ ಬೆಟ್ಟದ ಹುಂಡಿ ಎಣಿಕೆ: 35 ದಿನಗಳಲ್ಲಿ 25.27 ಲಕ್ಷ ರೂ. ದೇಣಿಗೆ ಸಂಗ್ರಹ.

ಕೊಪ್ಪಳ, ಆಗಸ್ಟ್.9,2023(www.justkannada.in):  ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿನ ಆಂಜನೇಯ  ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು 25.27 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ.

ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸಿ ಆಂಜನೇಯನ ಕೃಪೆಗೆ ಪಾತ್ರರಾಗುತ್ತಾರೆ. ಇನ್ನು ಹನುಮ ಜಯಂತಿಯಂದು ಅದ್ದೂರಿಯಾಗಿ ಜಾತ್ರೆ ಜರುಗುತ್ತದೆ. ಇನ್ನು ಕಳೆದ ಜುಲೈ 4 ರಂದು ಹುಂಡಿ ತೆರೆಯಲಾಗಿತ್ತು. ಅಂದು 26.57 ಲಕ್ಷ ಹಣ ಹುಂಡಿಯಲ್ಲಿ ಸಂಗ್ರಹವಾಗಿತ್ತು. ಇದಾದ 35 ದಿನಗಳ ಬಳಿಕ ಅಂಜನಾದ್ರಿ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, ಬರೊಬ್ಬರಿ 25.27 ಲಕ್ಷ ರೂಪಾಯಿ ಹುಂಡಿಯಲ್ಲಿ ಸಂಗ್ರಹವಾಗಿದೆ.

ಅಂಜನಾದ್ರಿ ಬೆಟ್ಟಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಬಂದು ದರ್ಶನ ಪಡೆಯುತ್ತಾರೆ. ಈ ಬೆಟ್ಟವನ್ನು ಹತ್ತಲು ಬರೊಬ್ಬರಿ 550 ಮೆಟ್ಟಿಲುಗಳನ್ನು ಏರಬೇಕು. ಜೊತೆಗೆ ಬೆಟ್ಟದ ಮೇಲಿನ ದೇವಾಲಯವು ನೋಡಲು ಆಕರ್ಷಕವಾಗಿದ್ದು, ಭಕ್ತ ಸಮೂಹವನ್ನು ಸ್ವಾಗತಿಸುತ್ತದೆ.

Key words: Hundi count – Anjanadri Hill-Rs 25.27 lakh- Collection