ಹಮ್ ಆಪ್ ಕೆ ಹೈ ಕೌನ್” ಸಿನಿಮಾಗೆ 26 ವರ್ಷದ ಸಂಭ್ರಮ…

 

ಮುಂಬೈ,ಆ,6,2020(www.justkannada.in): ಬಾಲಿವುಡ್ ನಟ  ಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ ರೊಮ್ಯಾಂಟಿಕ್ ಸಿನಿಮಾ “ಹಮ್ ಆಪ್ ಕೆ ಹೈ ಕೌನ್  26ರ ಸಂಭ್ರಮ.

ಹಮ್ ಆಪ್ ಕೆ ಹೈ ಕೌನ್  ತೆರೆಗೆ ಬಂದು 26 ವರ್ಷ ಕಳೆದಿದೆ. ಈ ಜನಪ್ರಿಯ ರೊಮ್ಯಾಂಟಿಕ್ ಸಿನಿಮಾ 1994 ರಿಲೀಸ್ ಆಗಿತ್ತು ಈ ಸಿನಿಮಾಗೆ 26 ವರ್ಷ ತುಂಬಿದೆ ಎಂದು ನಂಬಲು ಸಾಧ್ಯವೇ ಆಗುತ್ತಿಲ್ಲ. ಇಡೀ ಸಿನಿಮಾ ತಂಡದೊಂದಿಗೆ ಕಳೆದ ಮೋಜಿನ ನೆನಪುಗಳು ಮತ್ತು ಕಠಿಣ ಪರಿಶ್ರಮ ನೆನಪಾಗುತ್ತದೆ ಎಂದು ಮಾಧುರಿ ಅವರು ಟ್ವೀಟ್​ ಮಾಡಿದ್ದಾರೆ.

ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಸಲ್ಮಾನ್​ ಖಾನ್​ ಅವರೊಂದಿಗಿದ್ದ ಫೋಟೊ ಹಾಗೂ ಇತ್ತೀಚಿನ ಫೋಟೊವನ್ನು ಶೇರ್​ ಮಾಡಿದ್ದಾರೆ.