ಹೊಯ್ಸಳ ದೇವಾಲಯಗಳು ಯುನೆಸ್ಕೋ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆ: ಸಂತಸ ಹಂಚಿಕೊಂಡ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಸೆಪ್ಟಂಬರ್,19,2023(www.justkannada.in): ಹೊಯ್ಸಳರ ಕಾಲದ ದೇವಾಲಯಗಳು ಯುನೆಸ್ಕೋ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾಗಿದ್ದು ಈ ಹಿನ್ನೆಲೆಯಲ್ಲಿ ಸಿಎಂ ಸಿದ‍್ಧರಾಮಯ್ಯ ಸಂತಸ ಹಂಚಿಕೊಂಡಿದ್ದಾರೆ.

ಈ ಕುರಿತು ಫೋಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ಧರಾಮಯ್ಯ, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಕೂಡ. ನಾಡಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶ್ವ ಮಟ್ಟದ ಮೂಲಸೌಲಭ್ಯ ಮತ್ತು ಸುರಕ್ಷತೆ ಒದಗಿಸಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ.

ಐತಿಹಾಸಿಕ ಸ್ಥಳಗಳು ಮತ್ತು ಪುಣ್ಯ ಕ್ಷೇತ್ರಗಳ ತೊಟ್ಟೆಲು ಕರ್ನಾಟಕಕ್ಕೆ ಸ್ವಾಗತ  ಎಂದಿದ್ದಾರೆ ಸಿಎಂ ಸಿದ್ಧರಾಮಯ್ಯ.

ರಾಜ್ಯದ ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳನ್ನ ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಸೇರಿಸಲಾಗಿದೆ.  ಈ ಪ್ರತಿಷ್ಠಿತ ಮಾನ್ಯತೆ ಪಡೆದ ಭಾರತದ 42ನೇ ತಾಣವಾಗಿದೆ.  ಪಶ್ಚಿಮ ಬಂಗಾಳದ ಶಾಂತಿನಿಕೇತನವನ್ನ ಯುನೆಸ್ಕೋದ ಮತ್ತೊಂದು ಪಾರಂಪರಿಕ ತಾಣವಾಗಿ ಸೇರಿಸಿದ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ.

Key words: Hoysala- temples- UNESCO -World -Heritage –List-CM Siddaramaiah