ರಸ್ತೆಯಲ್ಲಿ ಕಳೆದುಕೊಂಡ ದುಬಾರಿ ಮೊಬೈಲ್ ಟ್ರಾಫಿಕ್ ಪೊಲೀಸ್ ಸಹಾಯದಿಂದ ಮರಳಿ ಕೈಸೇರಿತು

ಬೆಂಗಳೂರು:ಆ-27:(www.justkannada.in) ಟ್ರ್ಯಾಫಿಕ್ ಮಧ್ಯೆ ಸಿಗ್ನಲ್ ನಲ್ಲಿ ಕಳೆದುಕೊಂಡಿದ್ದ ದುಬಾರಿ ಐಫೋನ್ ಒಂದನ್ನು ಟ್ರಾಫಿಕ್ ಕಾನ್‌ಸ್ಟೆಬಲ್ ಒಬ್ಬರು ಮರಳಿ ಅದರ ಮಾಲೀಕರಿಗೆ ತಲುಪಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮಹಿಳೆಯೊಬ್ಬರು ಸೋಮವಾರ ಬೆಳಿಗ್ಗೆ ಬಿಟಿಎಂ ಲೇಔಟ್ ನ 29ನೇ ಮುಖ್ಯರಸ್ತೆಯ ಗಂಗೋತ್ರಿ ಜಂಕ್ಷನ್ ನಲ್ಲಿ ಹೋಗುತ್ತಿದ್ದಾಗ ಸಂಚಾರ ದಟ್ಟಣೆಯ ಮಧ್ಯೆ ಅವರ 40,000ರೂ ಮೊಬೈಲ್ ಫೋನ್ ಕಳಗೆ ಬಿದ್ದಿದೆ. ಆದರೆ ಮಹಿಳೆಗೆ ಮೊಬೈಲ್ ಬಿದ್ದ ಬಗ್ಗೆ ತಕ್ಷಣಕ್ಕೆ ಗೊತ್ತಾಗಿಲ್ಲ. ಅರ್ಧ ಗಂಟೆ ಬಳಿಕ ನೋಡಿದಾಗ ಮೊಬೈಲ್ ಇಲ್ಲದಿರುವುದು ಗೊತ್ತಾಗಿದೆ.

ತಕ್ಷಣ ಹುಡುಕಲು ಆರಂಭಿಸಿದ್ದಾರೆ. ಮೊಬೈಲ್ ಎಲ್ಲಿ ಬಿಟ್ಟಿರಬಹುದು ಅಥಾವಾ ಎಲ್ಲಿಯಾದರೂ ಬಿದ್ದಿಹೋಯಿತೆ ಎಂದು ಗಾಬರಿಯಾಗಿದ್ದಾರೆ. ಅಲ್ಲಿಯೇ ಇದ್ದ ಟ್ರಾಫಿಕ್ ಫೋಲಿಸರಿಗೆ ತಿಳಿಸಿದ್ದಾರೆ ಅವರೂ ಕೂಡ ಅವರ ಸಹಾಯಕ್ಕೆ ಬಂದು ಮೊಬೈಲ್ ಫೋನ್ ಹುಡುಕಿದ್ದಾರೆ. ಅಂತಿಮವಾಗಿ ಲೋಕೇಶ್ ಎಂಬ ಸಂಚಾರಿ ಪೊಲೀಸೊಬ್ಬರಿಗೆ ಮೊಬೈಲ್ ಸಿಕ್ಕಿದ್ದು ಮಹಿಳೆಗೆ ಮರಳಿ ನೀಡಿದ್ದಾರೆ.

ಲೋಕೇಶ್ ಹೇಳುವ ಪ್ರಕಾರ ಅಂದು ಬೆಳಿಗ್ಗೆ 9 ಗಂಟೆಗೆ ಅವರು ಗಂಗೋತ್ರಿ ಜಂಕ್ಷನ್ ನಲ್ಲಿ ಡ್ಯೂಟಿಯಲ್ಲಿದ್ದಾಗ ಮೊಬೈಲ್ ಫೋನ್ ಒಂದು ರಸ್ತೆಯಲ್ಲಿ ಬಿದ್ದಿತ್ತು. ಅದೃಷ್ಟವಶತಾ ವಾಹನದ ಕೆಳಗೆ ಸಿಲುಕಿ ಅದು ಹಾನಿಯಾಗಿರಲಿಲ್ಲ. ಅದನ್ನು ಎತ್ತಿಕೊಂಡು ಯಾರಾದರೂ ಮೊಬೈಲ್ ಕಳೆದುಕೊಂಡಿದ್ದೀರಾ ಎಂದು ಹಲವರ ಬಳಿ ವಿಚಾರಿಸಿದೆ ಆದರೆ ಯಾರೂ ಕಳೆದುಕೊಂಡಿಲ್ಲ ಎಂದರು. ಹಾಗಾಗಿ ಅದನ್ನು ನನ್ನ ಬಳಿಯೇ ಇರಿಸಿಕೊಂಡು ಮೊಬೈಲ್ ಮಾಲೀಕರು ಹಿಂತಿರುಗಿ ಬರುವವರೆಗೆ ಕಾಯುತ್ತಿದ್ದೆ.

ಸುಮಾರು ಅರ್ಧಗಂಟೆ ಬಳಿಕ ಮಹಿಳೆಯೊಬ್ಬರು ತಮ್ಮ ಮೊಬೈಲ್ ಎಲ್ಲಿ ಬಿಟ್ಟೆ ಎಂದು ತಿಳಿಯಲು ಆ ಮೊಬೈಲ್ ಗೆ ಕರೆ ಮಾಡಿದರು. ಆಗ ಅದು ಸುರಕ್ಷಿತವಾಗಿ ಇರುವುದಾಗಿ ತಿಳಿಸಿದೆ. ತಕ್ಷಣ ಅವರು ಬಂದು ಮೊಬೈಲ್ ತೆಗೆದುಕೊಂಡು ಹೋದರು. ಇದೇ ಮೊದಲಬಾರಿ ರಸ್ತೆಯಲ್ಲಿ ಮೊಬೈಲ್ ಬಿದ್ದಿರುವುದನ್ನು ನಾನು ನೋಡಿದ್ದು ಎಂದು ಲೋಕೇಶ್ ತಿಳಿಸಿದ್ದಾರೆ.

ರಸ್ತೆಯಲ್ಲಿ ಕಳೆದುಕೊಂಡ ದುಬಾರಿ ಮೊಬೈಲ್ ಟ್ರಾಫಿಕ್ ಪೊಲೀಸ್ ಸಹಾಯದಿಂದ ಮರಳಿ ಕೈಸೇರಿತು

How a lost iPhone came back to owner