ಓಟಿಟಿಗೆ ಬರುತ್ತಿದ್ದಾರೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ !

ಬೆಂಗಳೂರು, ಸೆಪ್ಟೆಂಬರ್ 12, 2023 (www.justkannada.in): ಚಿತ್ರದ ಟೀಸರ್, ಪೋಸ್ಟರ್, ಸೋಷಿಯಲ್ ಮೀಡಿಯಾದಲ್ಲಿ ಕ್ರಿಯೇಟಿವ್ ಪ್ರಮೋಷನ್ ಮೂಲಕ ಗಮನ ಸೆಳೆದು ಗೆದ್ದ ಚಿತ್ರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಓಟಿಟಿಗೆ ಕಾಲಿಟ್ಟಿದೆ.

ಹೌದು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸೆ,15 ರಂದು ಝೀ-5 ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಚಿತ್ರದ ನಿರ್ಮಾಪಕ ವರುಣ್  ತಿಳಿಸಿದ್ದಾರೆ.

ಅಂದಹಾಗೆ ಈ ಚಿತ್ರ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಕನ್ನಡದಲ್ಲಿ ಹೊಸ ರೀತಿಯ ಸಿನಿಮಾ ಅನ್ನುವ ಅಭಿಪ್ರಾಯ ಕೂಡ ಬಂದಿದೆ. ಜತೆಗೆ 50 ದಿನವನ್ನೂ ಕೂಡ ಪೂರೈಸಿದೆ.

ಹಾಸ್ಟೆಲ್ ಹುಡುಗರು ಸಿನಿಮಾ ತೆಲುಗು ಭಾಷೆಗೂ ಡಬ್ ಆಗಿತ್ತು. ಕಳೆದ ತಿಂಗಳು ಅಗಸ್ಟ್-26 ರಂದು ಚಿತ್ರ ರಿಲೀಸ್ ಆಗಿತ್ತು. ಈ ಚಿತ್ರದ ಮೂಲಕ ನಿತಿನ್ ಕೃಷ್ಣಮೂರ್ತಿ ಡೈರೆಕ್ಟರ್ ಗಮನ ಸೆಳೆದಿದ್ದಾರೆ.