Sunday, September 20, 2026

BDA Apartments

ಕನ್ನಡ ಬಿಗ್ ಬಾಸ್ ಸೀಸನ್-10ಗೆ ಭರ್ಜರಿ ತಯಾರಿ BDA JK_Adv BDA Adv
Home Cinema ಕನ್ನಡ ಬಿಗ್ ಬಾಸ್ ಸೀಸನ್-10ಗೆ ಭರ್ಜರಿ ತಯಾರಿ

ಕನ್ನಡ ಬಿಗ್ ಬಾಸ್ ಸೀಸನ್-10ಗೆ ಭರ್ಜರಿ ತಯಾರಿ

ಬೆಂಗಳೂರು, ಸೆಪ್ಟೆಂಬರ್ 12, 2023 (www.justkannada.in): ಕನ್ನಡ ಬಿಗ್ ಬಾಸ್ 10ನೇ ಸೀಸನ್‌ಗೆ ಭರ್ಜರಿ ತಯಾರಿ ನಡೆಯುತ್ತಿದೆ.

ಕಲರ್ಸ್ ಕನ್ನಡ ಹಾಗೂ ಎಂಡಮೋಲ್ ಕಾಂಬಿನೇಷನ್‌ನಲ್ಲಿ ಬಿಗ್ ಬಾಸ್ ಸೀಸನ್ 10 ಶೀಘ್ರವೇ ಆರಂಭ ಆಗಲಿದೆ ಎಂಬ ಸುದ್ದಿ ಹೊರಬಿದ್ದಿದೆ.

ಅಕ್ಟೋಬರ್ 8ಕ್ಕೆ ಬಿಗ್ ಬಾಸ್ ಸೀಸನ್ 10 ಆರಂಭ ಆಗಲಿದೆ ಎನ್ನಲಾಗುತ್ತಿದೆ. ಕಿರುತೆರೆ ನಟಿ ನಮ್ರತಾ ಗೌಡ, ಸೋಶಿಯಲ್ ಮೀಡಿಯಾ ಸೆಲೆಬ್ರೆಟಿ ಭೂಮಿಕಾ ಬಸವರಾಜ್, ನಟ ಸುನೀಲ್ ರಾವ್, ಮಾನಸಿ ಜೋಷಿ ಸೇರಿದಂತೆ ಹಲವರ ಹೆಸರು ಬಿಗ್ ಬಾಸ್ ಸೀಸನ್ 10ಕ್ಕೆ ಕೇಳಿ ಬರುತ್ತಿದೆ.

ಈ ಮೊದಲು ಸೆಪ್ಟೆಂಬರ್ ಕೊನೆಯಲ್ಲಿಯೇ ಬಿಗ್ ಬಾಸ್ ಆರಂಭವಾಗಲಿದೆ ಎನ್ನಲಾಗಿತ್ತು. ಆದರೀಗ ಸ್ವಲ್ಪ ತಡವಾಗಿ ಬಿಗ್ ಬಾಸ್ ಸೀಸನ್ 10 ಆರಂಭ ಆಗಲಿದೆ ಎನ್ನಲಾಗಿದೆ.