Monday, November 16, 2026

Dasara Wishes

ಸತೀಶ್ ಜಾರಕಿಹೊಳಿ ನಿವಾಸದ ಮೇಲೆ DasraWishes_JK DasraWishes JK
Happy Dasara
Home Front Page ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ: ಕೇಂದ್ರದ ವಿರುದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ: ಕೇಂದ್ರದ ವಿರುದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಹೆಣ್ಣುಮಕ್ಕಳಿಗೆ ಅನ್ಯಾಯ ಆಯಿತು ಎಂದಾಗ ಒಂದು ಬಾರಿಯಾದರು ಹಾಸನ ಎಸ್ಪಿ ಕಚೇರಿಗೆ ಹೋಗಿ ಕುಳಿತಿದ್ದಾರಾ-ಪ್ರಿಯಾಂಕ್‌ ಖರ್ಗೆ

ಬೆಂಗಳೂರು,ಸೆಪ್ಟಂಬರ್,9,2026 (www.justkannada.in):  ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಇದು ಕೇಂದ್ರದ ಪ್ರಾಯೋಜಿತ ದಾಳಿ. ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ದಾಳಿ ಆರಂಭ ಅಷ್ಟೆ. ನನ್ನ ಮೇಲೆ ಡಿಕೆ ಶಿವಕುಮಾರ್ ಮೇಲೂ ಮಾಡಬಹುದು  ನೋಡುತ್ತಿರಿ ಎಂದರು.

ಇಲ್ಲಿನ ಬಿಜೆಪಿ ನಾಯಕರ ಮೇಲೆ ಕೇಂದ್ರದವರಿಗೆ ನಂಬಿಕೆ ಇಲ್ಲ. ಹೀಗಾಗಿ ಇಡಿ ಐಟಿ ಇವರನ್ನ ಬಳಸಿಕೊಂಡು ಚುನಾವಣೆ ಎದುರಿಸ್ತಾರೆ ನಾಗೇಂದ್ರ ಮೇಲೆ ದಾಳಿ ಆಯ್ತು ಏನಾಯ್ತು? ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ jk02_new jk02 new

Key words:  ED raid, Satish Jarkiholi, residence, Home Minister, Priyank Kharge