ಕರಾವಳಿ ಭಾಗ ಸೂಕ್ಷ್ಮವಾಗಿ ಪರಿಗಣನೆ: ಮುಲಾಜಿಲ್ಲದೇ ಕ್ರಮ: ಗೃಹ ಸಚಿವ ಡಾ.ಜಿ. ಪರಮೇಶ್ವರ್

ಬೆಂಗಳೂರು, ಮೇ, 29,2025 (www.justkannada.in):  ಬಂಟ್ವಾಳದ ಅಬ್ದುಲ್ ರಹಿಮಾನ್ ಬರ್ಬರ ಹತ್ಯೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಸಾಕಷ್ಟು ಚರ್ಚೆಯಾಗಿದ್ದು  ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕರಾವಳಿ ಭಾಗ ಸೂಕ್ಷ್ಮವಾಗಿ ಪರಿಗಣನೆ ಮಾಡಲಾಗಿದೆ. ಈ ಸಂಬಂಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಗಂಭೀರವಾಗಿ ಪರಿಗಣನೆ ಮಾಡಿದ್ದೇವೆ. ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ.vtu

ಕರಾವಳಿ ಭಾಗ ಅಂದರೆ ಉಡುಪಿ, ಶಿವಮೊಗ್ಗ ಮತ್ತು ಮಂಗಳೂರನ್ನು ಸೂಕ್ಷ್ಮವಾಗಿ ಪರಿಗಣಿಸಿದೆ. ಮುಲಾಜಿಲ್ಲದೆ ಕ್ರಮ ಕೈಗೊಳ್ತೀವಿ, ಆದರೆ ಯಾವ ಕ್ರಮ ಅಂತಾ ಹೇಳಲ್ಲ. ಇದನ್ನು ಹತ್ತಿಕ್ಕದೆ ಬಿಡುವುದಿಲ್ಲ ಎಂದು  ಪರಮೇಶ್ವರ್ ತಿಳಿಸಿದ್ದಾರೆ.

Key words: Coastal region, carefully, considered, Home Minister, Dr. G. Parameshwar