Sunday, August 9, 2026

BDA Apartments

Home Front Page BSY ಅಭಿಮಾನೋತ್ಸವ: ಯಡಿಯೂರಪ್ಪರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಅಮಿತ್ ಶಾ

BSY ಅಭಿಮಾನೋತ್ಸವ: ಯಡಿಯೂರಪ್ಪರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಅಮಿತ್ ಶಾ

ಚಿತ್ರದುರ್ಗ,ಮೇ,9,2026 (www.justkannada.in): ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯಕ್ಕೆ ಕಾಲಿಟ್ಟು 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಬಿಎಸ್ ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪಾಲ್ಗೊಂಡು ಚಾಲನೆ ನೀಡಿದರು.

ಸಮಾರಂಭದಲ್ಲಿ ಯಡಿಯೂರಪ್ಪ ಕುರಿತು ಎರಡು ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ಕೇಂದ್ರ ಸಚಿವ ಅಮಿತ್‌ ಶಾ ಅವರು  ಬಿಎಸ್‌ ಯಡಿಯೂರಪ್ಪಗೆ ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು.

ಬಳಿಕ ಮಾತನಾಡಿದ ಅಮಿತ್ ಶಾ, ರೈತನಾಯಕ  ಬಿಎಸ್ ವೈ ಅವರನ್ನು ಅಭಿನಂದಿಸಲು ಬಂದಿದ್ದೇನೆ. ಬಿಎಸ್ ವೈ ಅವರ 50 ವರ್ಷ ಸಾರ್ವಜನಿಕ ಬಿಜೆಪಿ ಸೇವೆಯನ್ನು ಸಂಭ್ರಮಿಸುತ್ತಿದ್ದೇವೆ. ಬಿಎಸ್ ವೈ ತಮ್ಮದೇ ಹಾದಿ ಸೃಷ್ಟಿಸಿ ಬೇರೆಯವರಿಗೆ ದಾರಿ ತೋರಿಸಿದವರು.  ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಬಿಎಸ್ ವೈ ಈ ಹಂತಕ್ಕೆ ಬಂದಿದ್ದಾರೆ. ಬೆಂಗಳೂರನ್ನ ಜಾಗತಿಕ ಹಬ್ ಮಾಡಿದವರು.  ಬಿಎಸ್ ವೈ 50 ವರ್ಷಗಳ ಕಾಲ ಕರ್ನಾಟಕ ದೇಶದ ಸೇವೆ ಮಾಡಿದ್ದಾರೆ. ದೇಶದಲ್ಲೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಮೊದಲ ಸಿಎಂ ಬಿಎಸ್ ವೈ. ಈ ಮೂಲಕ ದೇಶಕ್ಎ ಮಾದರಿಯಾಗಿದ್ದಾರೆ ಎಂದು ಹಾಡಿಹೊಗಳಿದರು.

ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ, ಸುತ್ತೂರು ಮಠ ಸ್ವಾಮೀಜಿ, ನಿರಂಜನಾಪುರಿ ಸ್ವಾಮೀಜಿ, ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಶಾಂತವೀರ ಮಹಾ ಸ್ವಾಮೀಜಿ, ಮುರುಗರಾಜೇಂದ್ರ ಸ್ವಾಮೀಜಿ,  ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಸದಾನಂದಗೌಡ, ಮಾಜಿ ಸಂಸದ ಪ್ರಭಾಕರ್ ಕೋರೆ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿ ಹಲವರು ಉಪಸ್ಥಿತರಿದ್ದರು.

Key words: BSY Abhimanotsav, Union Minister, Amit Shah, praises, Yediyurappa