ಟಿಕೆಟ್ ಘೋಷಣೆ ಕಷ್ಟವೇನಿಲ್ಲ: ಗೆಲ್ಲಬೇಕೆಂದು ಚರ್ಚೆ ಮಾಡುತ್ತಿದ್ದಾರೆ –ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮಾರ್ಚ್,20,2026 (www.justkannada.in): ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಇನ್ನೂ ಘೋಷಣೆಯಾಗದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಟಿಕೆಟ್ ಘೋಷಣೆ ಕಷ್ಟವೇನಿಲ್ಲ ಗೆಲ್ಲಬೇಕೆಂದು ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಈ ಕುರಿತು ಮಾತನಾಡಿದ ಸಚಿವ ಪರಮೇಶ್ವರ್,  ಯಾರಿಗೆ ಟಿಕೆಟ್ ಕೊಡಬೇಕು ಎಂದು ಎರಡು ಕಡೆ ನೋಡುತ್ತಿದ್ದಾರೆ.  ಶಾಮನೂರು, ಎಚ್ ವೈ ಮೇಟಿ ಕುಟುಂಬಕ್ಕೆ ಟಿಕೆಟ್ ಬೇಡಿಕೆ ಸಹಜ. ಇದು ಕೆಲವು ಕಡೆ ಹೆಚ್ಚು ಅಲ್ಪಸಂಖ್ಯಾತರಿದ್ದಾರೆಂದು ಟಿಕೆಟ್ ಕೇಳುತ್ತಿದ್ದಾರೆ .  ಅಂತಿಮವಾಗಿ  ಕೆಪಿಸಿಸಿ ತೀರ್ಮಾನ ಮಾಡುತ್ತೆ ಎಂದರು.

ಚುನಾವಣೆ ಬಗ್ಗೆ ಚರ್ಚಿಸಲು ರಣದೀಪ್ ಸುರ್ಜೇವಾಲ ಬರುತ್ತಾರೆ. ಬೇರೆ ಬೇರೆ ವಿಚಾರಗಳನ್ನ ಚರ್ಚೆ ಮಾಡುತ್ತಾರೆ  ಯಾರು ಗೆಲ್ತಾರೆ ಎಂದು ಪಕ್ಷದ ಕಾರ್ಯಕರ್ತರಿಂದ ವರದಿ ಬರುತ್ತೆ  ಎಂದು ಸಚಿವ ಪರಮೇಶ್ವರ್ ತಿಳಿಸಿದರು.

Key words: Ticket, announcement, Congress, Home Minister, Parameshwar