ಬೆಂಗಳೂರು,ಡಿಸೆಂಬರ್,22,2025 (www.justkannada.in): ಬಿಜೆಪಿ ದೃಷ್ಟಿಯಲ್ಲಿಟ್ಟುಕೊಂಡು ದ್ವೇಷ ಭಾಷಣ ಕಾಯ್ದೆಯನ್ನು ತಂದಿಲ್ಲ. ಇದರಲ್ಲಿ ಬಿಜೆಪಿಯವರು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಯಾರನ್ನೋ ಗುರಿಯಾಗಿಟ್ಟುಕೊಂಡು ಈ ಕಾಯ್ದೆಯನ್ನ ಜಾರಿಗೆ ತರುತ್ತಿಲ್ಲ. ದ್ವೇಷ ಭಾಷಣ ಹತ್ತಿಕ್ಕಬೇಕು ಅಂತಾ ಸುಪ್ರೀಂಕೋರ್ಟ್ ಆದೇಶಿಸಿದೆ ಬಿಜೆಪಿ ದೃಷ್ಟಿಯಲ್ಲಿ ಇಟ್ಟಿಕೊಂಡು ಈ ಕಾಯ್ದೆ ತಂದಿಲ್ಲ. ಇದರಲ್ಲಿ ಬಿಜೆಪಿ ರಾಜಕಾರಣ ಮಾಡಲು ಹೊರಟಿದ್ದಾರೆಎ ಎಂದು ಕಿಡಿಕಾರಿದರು.
ಅಧೀವೇಶನದಲ್ಲಿ ಮಸೂದೆ ಪಾಸ್ ಆಗಿದೆ. ರಾಜ್ಯಪಾಲರಿಗೆ ಕಳಿಸುತ್ತೇವೆ. ರಾಜ್ಯಪಾರು ಮಸೂದೆ ಬಗ್ಗೆ ವಿವರಣೆ ಕೇಳಿದರೆ ಕೊಡಿತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.
Key words: Hate Speech Act, BJP, Home Minister, Parameshwar







