ದೂರುದಾರನ ಬಂಧನ ನಿಜ: ಅಂತಿಮ ವರದಿ ಬರುವವರೆಗೆ ಏನು ಹೇಳಲ್ಲ- ಗೃಹ ಸಚಿವ ಪರಮೇಶ್ವರ್

ಉಡುಪಿ, ಆಗಸ್ಟ್,23,2025 (www.justkannada.in):  ಧರ್ಮಸ್ಥಳ ಪ್ರಕರಣ ಸಂಬಂಧ ದೂರುದಾರನನ್ನ ಬಂಧಿಸಿರುವುದು ನಿಜ. ಎಸ್ ಐಟಿ ತನಿಖೆ ಮುಂದುವರೆದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ದೂರುದಾರನ ಬಂಧನ ಆಗಿರುವುದು ನಿಜ. ಉಳಿದ ಮಾಹಿತಿಯನ್ನು ಎಸ್‌ಐಟಿ ನೀಡಲಿದೆ. ಯಾವ ರೀತಿ ತನಿಖೆ ನಡೆಸಬೇಕು ಎಂಬುದನ್ನು  ಎಸ್ ಐಟಿಯವರೇ ನಿರ್ಧರಿಸುತ್ತಾರೆ. ದೂರುದಾರೆ ಸುಜಾತ್ ಭಟ್ ರನ್ನು ತನಿಖೆ ಮಾಡುತ್ತಿದ್ದಾರೆ.  ಎಸ್ ಐಟಿ ತನಿಖೆ ಇನ್ನೂ ಮುಂದುವರೆದಿದೆ. ತನಿಖಾ ಹಂತದಲ್ಲಿ ನಾನು ಯಾವುದನ್ನೂ ಬಹಿರಂಗಪಡಿಸಲು ಆಗಲ್ಲ ಎಂದರು.

ಸುಜಾತಾ ಭಟ್‌ ಪ್ರಕರಣ ಹಾಗೂ ಸಾಕ್ಷಿದೂರುದಾರನ ಹಿಂದೆ ಜಾಲ ಇದೆ ಎಂಬ ಆರೋಪದ ಬಗ್ಗೆ ನಾನೇನೂ ಹೇಳಲು ಹಾಗುವುದಿಲ್ಲ. ಎಲ್ಲವನ್ನೂ ಎಸ್‌ಐಟಿ ತನಿಖೆ ಮಾಡುತ್ತಿದೆ. ಎಸ್‌ಐಟಿಯ ಅಂತಿಮ ವರದಿ ಬರುವವರೆಗೆ ನಾನು ಹೇಳಿಕೆ ನೀಡಲ್ಲ ಎಂದು ಪರಮೇಶ್ವರ್ ತಿಳಿಸಿದರು.

Key words: Dharmasthala case,  Complainant, arrest, Home Minister, Parameshwar