ಲೋಕಸಭೆ ಚುನಾವಣೆಯಲ್ಲಿ ಅಕ್ರಮ ಆರೋಪ: ಚು.ಆಯೋಗ ಗಂಭೀರವಾಗಿ ಪರಿಗಣಿಸಲಿ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಜುಲೈ,24,2025 (www.justkannada.in):  ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಆರೋಪ ಕುರಿತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ , ಈ ಬಗ್ಗೆ ಚುನಾವಣಾ ಆಯೋಗ ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಚುನಾವಣಾ ಆಕ್ರಮದ ಬಗ್ಗೆ ಮೊದಲಿನಿಂದಲೂ ಹೇಳುತ್ತಿದ್ದಾರೆ.  ಚುನಾವಣಾ ಆಯೋಗ ಇದನ್ನ ಗಮನ ಹರಿಸಬೇಕು. ಈ ವಿಚಾರವನ್ನ ಬಹಳ ಗಂಭೀರವಾಗಿ ಗಮನ ಹರಿಸಬೇಕು  ಯಾವ ಕ್ಷೇತ್ರದಲ್ಲಿ ಅಕ್ರಮವಾಗಿದೆ ಎಂದು ಗಮನ ಹರಿಸಬೇಕು ವೋಟರ್ ಲಿಸ್ಟ್ ಏರುಪೇರಾಗಿದೆ ಅಂತಾ ಹೇಳುತ್ತಲೇ ಬಂದಿದ್ದೇವೆ. ಚುನಾವಣಾ ಆಯೋಗ ಸಿರೀಯಸ್ ಆಗಿ ಗಮನಿಸಬೇಕು ಎಂದರು.

ಹೊಸ ಜಾತಿಗಣತಿಗೆ ಕಡಿಮೆ ಅವಧಿ ನೀಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್,  ತಾಂತ್ರಿಕವಾಗಿ 16 ದಿನಗಳಲ್ಲಿ ಸಮೀಕ್ಷೆ ಮಾಡಬಹುದು. ಈಗೆಲ್ಲಾ ತಂತ್ರಜ್ಞಾನ ಇದೆ. ಸಮೀಕ್ಷೆ ಮಾಡಬಹುದು. ಕೇಂದ್ರಕ್ಕೂ ರಾಜ್ಯಕ್ಕೂ ಸಮೀಕ್ಷೆಯಿಂಧ ಸಂಘರ್ಷ ಏನಿಲ್ಲ. ಶೈಕ್ಷಣಿಕ ಆರ್ಥಿಕ ಸಾಮಾಜಿಕ ಸ್ಥಿತಿಗತಿ ತಿಳಿಯಲು ಸಮೀಕ್ಷೆ ಮಾಡಲಾಗುತ್ತಿದೆ  ತಂತ್ರಜ್ಞಾನ ಬಳಸಿಕೊಂಡು ಬೇಗನೆ ಸರ್ವೆ ಮಾಡಬಹುದು  ಎಂದರು.

ಸಿಎಂ ಮತ್ತು ಡಿಸಿಎಂ ದೆಹಲಿ ಪ್ರವಾಸ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ದೆಹಲಿಯಲ್ಲಿ ಒಬಿಸಿ ಸಲಹಾ ಮಂಡಳಿ ಸಭೆ ನಡೆಯುತ್ತಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್  ಹೋಗ್ತಿದ್ದಾರೆ.  ಸಭೆಗೆ ನಮಗೆ ಅಹ್ವಾನ ಇಲ್ಲ. ಅವರಿಬ್ಬರೂ ಹೋಗುತ್ತಿದ್ದಾರೆ ಎಂದರು.vtu

Key words:  Allegations, Lok Sabha, elections,Home Minister, Parameshwar