ಕೆಪಿಸಿಸಿಗೆ ಹೊಸ ನಾಯಕತ್ವ: ಡಿಕೆಶಿ ಹೇಳಿರೋದು ಸರಿಯಾಗಿದೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು, ಮಾರ್ಚ್,4,2026 (www.justkannada.in): ಕೆಪಿಸಿಸಿಗೆ ಹೊಸ ನಾಯಕತ್ವ ಬೇಕು ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರ,  ಡಿಕೆ ಶಿವಕುಮಾರ್ ಹೇಳಿರೋದು ಸರಿಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ.ಡಾ.ಜಿ.ಪರಮೇಶ್ವರ್,  ಸಮಯ ಬಂದಾಗ ಇವೆಲ್ಲಾ ಬದಲಾವಣೆಗಳು ಆಗುತ್ತವೆ ಡಿಕೆ ಶಿವಕುಮಾರ್ ಹೇಳಿರೋದು ಸರಿಯಗಿದೆ. ಅದರಲ್ಲಿ ಏನು ತಪ್ಪಿಲ್ಲ. ಹೊಸನಾಯಕತ್ವವನ್ನು ಬೆಳೆಸಬೇಕು ಎಂದರು.

ಡಿಕೆ ಶಿವಕುಮಾರ್ ಡಿನ್ನರ್ ಪಾರ್ಟಿ ಆಯೋಜನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲಾ ನಡೆಯುತ್ತೆ ಸಿಎಂ ಊಟಕ್ಕೆ ಕರೆಯುತ್ತಾರೆ ಎಲ್ಲರೂ ವಿಶ್ವಾಸಕ್ಕೆ ತೆಹೆದುಕೊಳ್ಳುತ್ತಾರೆ. ಇವೆಲ್ಲವೂ ನಡೆಯುತ್ತದೆ.  6 ವರ್ಷ ಕೆಪಿಸಿಸಿ ನಡೆಸುವುದು ಸುಲಭವಲ್ಲ ನಾನೂ ಆ ಸ್ಥಾನದಲ್ಲಿದ್ದೆ ಡಿಕೆ  ಶಿವಕುಮಾರ್ ಸುಧೀರ್ಘವಾಗಿ ಪಕ್ಷ ನಡೆಸಿದ್ದಾರೆ.  ಎಲ್ಲರ ಸಹಕಾರದಿಂದ ನಡೆಸಲು ಸಾಧ್ಯವಾಯಿತು ಎಂದು ಊಟಕ್ಕೆ ಕರೆದಿದ್ದಾರೆ ನನ್ನ ದೃಷ್ಠಿಯಲ್ಲಿ ಅದೇನು ತಪ್ಪಲ್ಲ. ಎಂದರು.

ಶಾಸಕರು ವಿದೇಶ ಪ್ರವಾಸಕ್ಕೆ ಹೋಗಿ ಬಂದ ವಿಚಾರ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,  ವಿದೇಶಕ್ಕೆ ಹೋಗಿ ಬಂದ ಶಾಸಕರನ್ನೇ ಕೇಳಿ. ಏಕೆ ಹೋಗಿದ್ರು ಯಾವ ಅಧ್ಯಯನಕ್ಕೆ ಹೋಗಿದ್ದರು ಕೇಳಿ.  ನಾನು ಹೇಳಿದ್ರೆ ಬರೀ ಊಹೆ ಆಗುತ್ತೆ. ಪ್ರವಾಸಕ್ಕೆ ಹೋದವರನ್ನೇ ಕೇಳಿದ್ರೆ ಸ್ಪಷ್ಟವಾಗಿ ಹೇಳುತ್ತಾರೆ ಎಂದರು.

Key words: New leadership, KPCC, DK Shivakumar, Home Minister, Dr. G. Parameshwar