ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ : ಎಲ್ಲಾ ಪರಿಸ್ಥಿತಿಗೆ ಕಾಂಗ್ರೆಸ್ ನವರೇ ಕಾರಣ ಹೊಣೆ- ಗೃಹ ಸಚಿವ ಅರಗ ಜ್ಞಾನೇಂದ್ರ.

ಬೆಂಗಳೂರು,ಮಾರ್ಚ್,23,2022(www.justkannada.in): ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಪರಿಸ್ಥಿತಿಗೆ ಕಾಂಗ್ರೆಸ್ ನವರೇ ಕಾರಣ ಹೊಣೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಿಡಿ ಕಾರಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ,  ಹಿಜಾಬ್ ತೀರ್ಪು ವಿರೋಧಿಸಿ ಅಂಗಡಿ ಬಂದ್ ಮಾಡಿ ಒಂದು ಕೋಮಿನಿಂದ ಪ್ರತಿಭಟನೆ ನಡೆಸಿದರು.  ಅದರ ಮುಂದುವರೆದ ಭಾಗವಾಗಿ ಇದು ನಡೆಯುತ್ತಿದೆ. ಇದು ಖಂಡಿತ ದುರದೃಷ್ಟಕರ.  ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಇಲ್ಲ. ಮಾಹಿತಿ ತರಿಸಿಕೊಳ್ಳುತ್ತೇನೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

ಈ ಎಲ್ಲಾ ಪರಿಸ್ಥಿತಿಗೆ ಕಾಂಗ್ರೆಸ್ ನವರೇ ಕಾರಣ, ಹೊಣೆ ಅಧಿಕಾರಕ್ಕೆ ಒಂದು ಕೋಮಿನ ಒಲೈಕೆ ಮಾಡಿ  ಈ ದೇಶದ ಎಲ್ಲ ಸಮುದಾಯದ ಮನಸ್ಸನ್ನ ಒಡೆದರು ಎಂದು ಅರಗ ಜ್ಞಾನೇಂದ್ರ ಕಿಡಿಕಾರಿದರು.

Key words: home minister-Araga Jnanendra- Restrictions – fairs