ಮುಂದಿನ ವಾರ ಬ್ಯಾಂಕ್ ಸೇವೆಯಲ್ಲಿ ಭಾರಿ ವ್ಯತ್ಯಯ.

ಬೆಂಗಳೂರು,ಮಾರ್ಚ್,23,2022(www.justkannada.in): ಮುಂದಿನ ವಾರ ಬ್ಯಾಂಕ್ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಲಿದ್ದು, ಮುಂದಿನ ವಾರ ಎರಡು ದಿನಗಳು ಮಾತ್ರ ಬ್ಯಾಂಕ್ ಓಪನ್ ಇರುತ್ತದೆ.

ಹೌದು, ಮಾರ್ಚ್ 27 ರಿಂದ 29ರ ವರೆಗೆ ಬ್ಯಾಂಕ್ ನೌಕರರ ಮುಷ್ಕರ ಇರಲಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ, ಮಂಗಳವಾರ ಬ್ಯಾಂಕ್ ಕ್ಲೋಸ್ ಆಗಿರಲಿದೆ. ಈ ಮಧ್ಯೆ ಮಾರ್ಚ್ 30 ಮತ್ತು 31 ರಂದು ಬ್ಯಾಂಕ್ ಓಪನ್ ಇರುತ್ತದೆ. ಬಳಿಕ ಮತ್ತೆ ಏಪ್ರಿಲ್ 1 ರಂದು ಹೊಸ ಆರ್ಥಿಕ ವರ್ಷ ಆರಂಭವಾಗಿದ್ದು ಬ್ಯಾಂಕ್ ಓಪನ್ ಇದ್ದರೂ ಗ್ರಾಹಕ ಸೇವೆ ಲಭ್ಯ ಇರುವುದಿಲ್ಲ. ಮತ್ತೆ ಏಪ್ರಿಲ್ 2 ರಂದು ಯುಗಾದಿ ಹಿನ್ನೆಲೆ ಬ್ಯಾಂಕ್‌ ಗೆ ರಜೆ ಇರಲಿದೆ. ಹೀಗಾಗಿ ಒಟ್ಟಾರೆ ಮುಂದಿನ ವಾರ 2 ದಿನ ಮಾತ್ರ ಬ್ಯಾಂಕ್ ಓಪನ್ ಇರಲಿದೆ.

ಹೀಗಾಗಿ ಮುಂದಿನವಾರ ಸಾಲು ಸಾಲು ಬ್ಯಾಂಕ್ ರಜೆ ಇರುವುದರಿಂದ ಗ್ರಾಹಕರು ತುರ್ತು ಕೆಲಸಗಳನ್ನು ಶೀಘ್ರ ಪೂರೈಸುವುದು ಒಳ್ಳೆಯದು.

Key words: bank –service- next week-change