Sunday, August 23, 2026

BDA Apartments

Home Cinema ಪುತ್ರಿಗೆ ಇಂಡಿಯಾ ಎಂದು ಹೆಸರಿಟ್ಟ ಹಾಲಿವುಡ್ ನಟ ಕ್ರಿಸ್ ಹೆಮ್ಸ್‌ವರ್ಥ್

ಪುತ್ರಿಗೆ ಇಂಡಿಯಾ ಎಂದು ಹೆಸರಿಟ್ಟ ಹಾಲಿವುಡ್ ನಟ ಕ್ರಿಸ್ ಹೆಮ್ಸ್‌ವರ್ಥ್

ಮುಂಬೈ, ಜೂನ್ 12, 2019 (www.justkannada.in): ಹಾಲಿವುಡ್ ಖ್ಯಾತ ನಟ ಕ್ರಿಸ್ ಹೆಮ್ಸ್‌ವರ್ಥ್ ತಮ್ಮ ಪುತ್ರಿಗೆ ಇಂಡಿಯಾ ಎಂದು ಹೆಸರಿಡುವ ಮೂಲಕ ಭಾರತೀಯರ ಗಮನ ಸೆಳೆದಿದ್ದಾರೆ.

ಹಾಲಿವುಡ್‍ನ ಖ್ಯಾತ ಎವೆಂಜರ್ಸ್ ಚಿತ್ರಗಳಲ್ಲಿ ಥಾರ್ ಪಾತ್ರದಲ್ಲಿ ನಟಿಸಿ ಸಿನಿರಸಿಕರ ಗಮನ ಸೆಳೆದಿದ್ದ ಕ್ರಿಸ್ ಹೆಮ್ಸ್‌ವರ್ಥ್ ತಮ್ಮ ಪುತ್ರಿಗೆ ಇಂಡಿಯಾ ಎಂದು ಹೆಸರಿಡುವ ಮೂಲಕ ಗಮನ ಸೆಳೆದಿದ್ದಾರೆ.

ನಟ ಕ್ರಿಸ್ ಹೆಮ್ಸ್‌ವರ್ಥ್ ಅವರಿಗೆ ಭಾರತದ ಮೇಲೆ ವಿಶೇಷ ಪ್ರೀತಿ ಇದೆ. ಹೀಗಾಗಿ ತಮ್ಮ ಮುದ್ದಿನ ಮಗಳಿಗೆ ಇಂಡಿಯಾ ರೋಸ್ ಎಂದು ಕ್ರಿಸ್ ನಾಮಕರಣ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಕ್ರಿಸ್ ಅವರೇ ಹೇಳಿಕೊಂಡಿದ್ದಾರೆ.