ಒಂದು ವೇಳೆ ನಾನು ಹಿಟ್ಲರ್ ಆಗಿದ್ದರೇ ಧಾರವಾಡದಲ್ಲಿ ಚುನಾವಣೆಯೇ ನಡೆಯುತ್ತಿರಲಿಲ್ಲ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಹುಬ್ಬಳ್ಳಿ, ಏಪ್ರಿಲ್, 11,2024 (www.justkannada.in): ಶಾಸಕ ವಿನಯ್ ಕುಲಕರ್ಣಿ ನನ್ನನ್ನು ಹಿಟ್ಲರ್ ಎಂದು ಕರೆದಿದ್ದಾರೆ. ಒಂದು ವೇಳೆ ನಾನು ಹಿಟ್ಲರ್ ಆಗಿದ್ದರೆ ಧಾರವಾಡ ಲೋಕಸಭಾ ಚುನಾವಣೆಯೇ ನಡೆಯುತ್ತಿರಲಿಲ್ಲ. ವಿನಯ ಕುಲಕರ್ಣಿ ಹತಾಶರಾಗಿ ಹೇಳುತ್ತಿದ್ದಾರೆ  ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದರು.

ಈ ಕುರಿತು ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನವೇ ಸರ್ವಸ್ವ, ಭಗವದ್ಗೀತೆ, ರಾಮಾಯಣ ಆಗಿದೆ., ತ್ರಿಬಲ್ ತಲಾಖ್ ರದ್ದು, 370ಕಲಂ ರದ್ದು ಇನ್ನಿತರ ಕ್ರಮಗಳನ್ನು ಸಂವಿಧಾನದ ಅಡಿಯಲ್ಲಿಯೇ ಪ್ರಧಾನಿ ಮೋದಿ ಕೈಗೊಂಡಿದ್ದಾರೆ ಎಂದು ಹೇಳಿದರು.

ಧಾರವಾಡ ಕ್ಷೇತ್ರದಿಂದ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈ ವಿಚಾರ ಕುರಿತು ಏನೂ ಪ್ರತಿಕ್ರಿಯಿಸಲ್ಲ ಎಂದರು.

ಇದೇ ವೇಳೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಪ್ರಹ್ಲಾದ್ ಜೋಶಿ, ಮನೆಯಲ್ಲಿ ಮಗು ಹುಟ್ಟೋದು ಸಹಜ, ಆದರೆ ಆ ಮಗು ನಮ್ಮ 2000 ರೂಪಾಯಿಂದಲೇ ಹುಟ್ಟಿದೆ ಅನ್ನೋ ಮಾನಸಿಕತೆಗೆ ಕಾಂಗ್ರೆಸ್ ತಲುಪಿದೆ‌ ಎಂದು ಟೀಕಿಸಿದರು.

Key words: Hitler, Dharwad, Prahlad Joshi