Monday, October 12, 2026

Dasara Wishes

Happy Dasara
Home Front Page ಟಿಪ್ಪುವನ್ನ ಉರಿಗೌಡ ನಂಜೇಗೌಡ ಕೊಂದಿದ್ದು ಐತಿಹಾಸಿಕ ಸತ್ಯ: ಹೆಚ್.ಡಿಕೆಗೆ  ಸಿ.ಟಿ ರವಿ ಟಾಂಗ್.

ಟಿಪ್ಪುವನ್ನ ಉರಿಗೌಡ ನಂಜೇಗೌಡ ಕೊಂದಿದ್ದು ಐತಿಹಾಸಿಕ ಸತ್ಯ: ಹೆಚ್.ಡಿಕೆಗೆ  ಸಿ.ಟಿ ರವಿ ಟಾಂಗ್.

ಧಾರವಾಡ,ಮಾರ್ಚ್,17,2023(www.justkannada.in)  ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಉರಿಗೌಡ ಮತ್ತು ನಂಜೇಗೌಡರ ವಿಚಾರ ಬಾರಿ ಸುದ್ದಿಯಾಗುತ್ತಿದ್ದು ಈ ಕುರಿತು ಮತ್ತೆ ಶಾಸಕ ಸಿ.ಟಿ ರವಿ ಪ್ರತಿಕ್ರಿಯಿಸಿ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಧಾರವಾಡದಲ್ಲಿ ಈ ಬಗ್ಗೆ ಮಾತನಾಡಿದ ಶಾಸಕ ಸಿ.ಟಿ ರವಿ, ಉರಿಗೌಡ ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು ಟಿಪ್ಪುವನ್ನ ಉರಿಗೌಡ  ನಂಜೇಗೌಡ ಕೊಂದಿದ್ದು ಐತಿಹಾಸಿಕ ಸತ್ಯ. ಟಿಪ್ಪು ಹಾಸನವನ್ನ ಕೈಮಾಬಾದ್ ಎಂದು ಕರೆದಿದ್ದ.  ಹೆಚ್.ಡಿ ಕುಮಾರಸ್ವಾಮಿಗೂ ಹಾಸನವನ್ನ ಕೈಮಾಬಾದ್ ಎಂದು ಕರೆಯಲು ಇಷ್ಟವೇನು…? ಎಂದು ವ್ಯಂಗ್ಯವಾಡಿದರು.

ಟಿಪ್ಪು ಸಿದ್ದಾಂತ ಬದುಕಿದ್ರೆ ಹಾಸನ ಕೈಮಾಬಾತ್ ಆಗುತ್ತೆ. ಟಿಪ್ಪು ಬದುಕಿದ್ದರೇ ಯಾರ್ಯಾರ ಕತೆ ಏನಾಗುತ್ತಿತ್ತೋ ಏನೋ..? ಎಂದು ಸಿ.ಟಿ ರವಿ ಹೇಳಿದರು.

Key words: historical fact -Tippu – Urigowda –Nanjegowda-  CT Ravi