ವಾರ್ಷಿಕ ಸಾಮಾನ್ಯ ಸಭೆ ನಡೆಸಲು ಮೂರು ತಿಂಗಳ ಕಾಲಾವಕಾಶ ನೀಡಿರುವುದು ಚರಿತ್ರಾರ್ಹ ನಿರ್ಧಾರ-ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ಸಿ ಆರ್ ಜನಾರ್ಧನ್

ಬೆಂಗಳೂರು ಸೆಪ್ಟಂಬರ್,9,2020(www.justkannada.in):  ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು ಕೋವಿಡ್-19 ಸಂದರ್ಭದಲ್ಲಿ ಎಜಿಎಂ ನಡೆಸಲು ಮೂರು ತಿಂಗಳ ಕಾಲಾವಕಾಶವನ್ನು ನೀಡಿರುವುದು ಚರಿತ್ರಾರ್ಹ ನಿರ್ಧಾರ ಎಂದು ಎಫ್.ಕೆ.ಸಿ.ಸಿ.ಐ ಅಧ್ಯಕ್ಷರಾದ ಸಿ ಆರ್ ಜನಾರ್ಧನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.jk-logo-justkannada-logo

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು ಮತ್ತು ಕಂಪನಿಗಳ ರಿಜಿಸ್ಟ್ರಾರ್ ರವರು ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ನಡೆಸಲು ನಿಗದಿತ ದಿನಾಂಕವನ್ನು ಸೆಪ್ಟೆಂಬರ್ 30ಕ್ಕೆ ನಡೆಸುವ ಬದಲು 31 ಡಿಸೆಂಬರ್ ವರೆಗೆ ವಿಸ್ತರಿಸಿ ಆದೇಶವನ್ನು ಹೊರಡಿಸಿದೆ. ಈ ಆದೇಶವನ್ನು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್.ಕೆ.ಸಿ.ಸಿ.ಐ.)ಯು ಸ್ವಾಗತಿಸುತ್ತದೆ. ಕೋವಿಡ್-19 ಸಂದರ್ಭದಲ್ಲಿ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು ತೆಗೆದುಕೊಂಡಿರುವ ಈ ಚರಿತ್ರಾರ್ಹ ನಿರ್ಧಾರವು ದೇಶದ ಸುಮಾರು 12 ಲಕ್ಷ ಕಂಪನಿಗಳಿಗೆ ಅನುಕೂಲವಾಗಲಿದೆ. ಇಂಥಹ ನಿರ್ಧಾರವು ಚರಿತ್ರೆಯಲ್ಲಿಯೇ ಪ್ರಥಮವಾಗಿದ್ದು, ಸಾಮಾನ್ಯವಾಗಿ ಎಲ್ಲಾ ಕಂಪನಿಗಳಿಗೆ ನೀಡಿರುವುದು ಮತ್ತೊಂದು ವಿಶೇಷತೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ವಾರ್ಷಿಕ ಲೆಕ್ಕಪತ್ರಗಳ ಅಂತಿಮಗೊಳಿಸುವಿಕೆ, ಲೆಕ್ಕಪರಿಶೋಧನೆಯ ಪೂರ್ಣಗೊಳಿಸುವಿಕೆ ಮತ್ತು ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರ ಮತ್ತು ಕೈಗಾರಿಕಾ ಸಮುದಾಯದ ಅವಧಿ ವಿಸ್ತರಣೆಯ ಬೇಡಿಕೆಯಾಗಿತ್ತು. ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು ಮತ್ತು ಕಂಪನಿಗಳ ರಿಜಿಸ್ಟ್ರಾರ್ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಈ ಪ್ರಕಟಣೆಯೊಂದಿಗೆ ಲಗತ್ತಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಹಲವಾರು ಕಂಪನಿಗಳು, ಸಂಸ್ಥೆಗಳು ನೀಡಿದ ಮನವಿಯ ಮೇರೆಗೆ ಮಾಡಿದ್ದು, ಈ ಸಂದರ್ಭದಲ್ಲಿ ಎಫ್.ಕೆ.ಸಿ.ಸಿ.ಐ. ಮಹಾಸಂಸ್ಥೆಯೂ ಸಹ ವಿಸ್ತರಣೆಗೆ ಕೋರಿದುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಆದೇಶವು ಕಂಪನಿಗಳು ನಿಗದಿತ ಸಮಯದಲ್ಲಿ ಜಿ.ಎನ್.ಎಲ್-1 ಸಲ್ಲಿಸದೇ ಇರುವ ಕಂಪನಿಗಳಿಗೂ, ನಿಗಧಿತ ಶುಲ್ಕ ಪಾವತಿ ಮಾಡದ ಕಂಪನಿಗಳಿಗೂ, ಈಗಾಗಲೇ ಅರ್ಜಿ ಸಲ್ಲಿಸಿ, ಅನುಮೋದನೆಯಾಗದಿರುವ ಅಥವಾ ತಿರಸ್ಕರಿಸಿರುವ ಕಂಪನಿಗಳು ಅನ್ವಯವಾಗುತ್ತಿರುವುದು ಅತ್ಯಂತ ವಿಶೇಷತೆಯಾಗಿದೆ.historic decision -three months' -time - hold -annual general meeting- FKCCI- President -CR Janardhan,

ಈ ಆದೇಶದೊಂದಿಗೆ ಕರ್ನಾಟಕದ ಎಲ್ಲಾ ಕಂಪನಿಗಳಿಗೆ 2020ರ ಡಿಸೆಂಬರ್ ಅಂತ್ಯದವರೆಗೂ ಸಮಯಾವಕಾಶವಿರುವುದರಿಂದ ಎಜಿಎಂ ನಡೆಸಲು ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆತಂತಾಗಿದೆ ಎಂದು ಜನಾರ್ಧನ್ ತಿಳಿಸಿದ್ದಾರೆ.

Key words: historic decision -three months’ -time – hold -annual general meeting- FKCCI- President -CR Janardhan,