ಹಿಜಾಬ್ –ಕೇಸರು ಶಾಲು ವಿವಾದ: ಇಂದು ಅಧಿಕಾರಿಗಳ ಜತೆ ಸಿಎಂ ಮಹತ್ವದ ಸಭೆ.

ಬೆಂಗಳೂರು,ಫೆಬ್ರವರಿ,11,2022(www.justkannada.in):  ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಲಿದ್ದಾರೆ.

ಹೀಗಾಗಿಲೇ ವಿಚಾರಣೆ ಮುಗಿಯುವವರೆಗೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಕೇಸರಿ ಶಾಲು ಧರಿಸುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಪ್ರೌಢಶಾಲೆಗಳನ್ನ ಆರಂಭಿಸಲು ಸರ್ಕಾರ ನಿರ್ಧರಿದೆ.

ಹೀಗಾಗಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಸಂಜೆ 6ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲಾ ಶಿಕ್ಷಣಾಧಿಕಾರಿ ಜಿಲ್ಲಾ ಸಿಇಒಗಳ ಜತೆ ಸಭೆ ನಡೆಸಲಿದ್ದಾರೆ.  ಪ್ರೌಢ ಶಾಲೆ ಕಾಲೇಜು ಪುನಾರಂಭದ ಕುರಿತು ಚರ್ಚೆ ನಡೆಸಲಿದ್ದಾರೆ ಸೋಮವಾರದಿಂದ 10ನೇ ತರಗತಿವರೆಗೆ ಶಾಲೆ ಆರಂಭವಾಗಲಿದ್ದು 2ನೇ ಹಂತದಲ್ಲಿ ಪಿಯು ಕಾಲೇಜುಗಳ ಆರಂಭ, ಜಿಲ್ಲಾ ವಾಸ್ತವ ಸ್ಥಿತಿ ನೋಡಿ ಶಾಂತಿ ಸುವ್ಯವಸ್ಥೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

Key words: Hijab –controversy- CM – meeting