ನನ್ನ ಓದು ಅರ್ಧಕ್ಕೆ ನಿಲ್ಲಿಸಿದ್ದೆ: ಈಗ ಮತ್ತೆ ಕಾಲೇಜಿಗೆ ಹೋಗ್ತೇನೆ; ಹಿಜಾಬ್ ಹೋರಾಟಗಾರ್ತಿ ಮುಸ್ಕಾನ್ ಹೇಳಿಕೆ.

ಮಂಡ್ಯ,ಡಿಸೆಂಬರ್,23,2023(www.justkannada.in):  ಹಿಜಾಬ್ ನಿಷೇಧ ವಾಪಸ್ ಪಡೆಯುವ ಸಿಎಂ ಸಿದ್ದರಾಮಯ್ಯ ನಿರ್ಧಾರವನ್ನ ಮಂಡ್ಯದಲ್ಲಿ ಹಿಜಾಬ್ ಹೋರಾಟಗಾರ್ತಿ ಮುಸ್ಕಾನ್ ಸ್ವಾಗತಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಸ್ಕಾನ್, ಹಿಜಾಬ್ ನಿಷೇಧ ವಾಪಸ್  ಪಡೆಯುವ ನಿರ್ಧಾರ ಸ್ವಾಗತಿಸುತ್ತೇನೆ. ಆದೇಶ ಹಿಂಪಡೆಯುವ ನಿರ್ಧಾರ ದಿಂದ ಖುಷಿಯಾಗಿದೆ. ನನ್ನ ಓದು ಅರ್ಧಕ್ಕೆ ನಿಲ್ಲಿಸಿದ್ದೆ. ಈಗ ಮತ್ತೆ ಕಾಲೇಜಿಗೆ ಹೋಗುತ್ತೇನೆ ಎಂದಿದ್ದಾರೆ.

ಕೋರ್ಟ್ ನಿಂದ ನ್ಯಾಯ ಸಿಗುವ ವಿಶ್ವಾಸವಿದೆ. ಹಿಜಾಬ್ ನಿಂದ ವಿದ್ಯಾಭ್ಯಾಸ ಬಿಟ್ಟಿದ್ದವರು ವಾಪಸ್ ಕಾಲೇಜಿಗೆ ಬನ್ನಿ. ಮಕ್ಕಳ ಶಿಕ್ಷಣದಲ್ಲೂ ರಾಜಕೀಯ ಮಾಡಬಾರದು. ನಮ್ಮ ಹಕ್ಕು ನಮಗೆ ನೀಡಿದಕ್ಕೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್  ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.

Key words: Hijab –activist-Muskan-mandya-college