Monday, September 14, 2026

BDA Apartments

ವಿನಯ್ ಕುಲಕರ್ಣಿ ಮೇಲ್ಮನವಿ ಅರ್ಜಿ ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟ್ BDA JK_Adv ...
Home Crime ವಿನಯ್ ಕುಲಕರ್ಣಿ ಮೇಲ್ಮನವಿ ಅರ್ಜಿ ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟ್

ವಿನಯ್ ಕುಲಕರ್ಣಿ ಮೇಲ್ಮನವಿ ಅರ್ಜಿ ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟ್

ಬೆಂಗಳೂರು,ಏಪ್ರಿಲ್,28,2026 (www.justkannada.in):  ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ಪ್ರಶ್ನಿಸಿ  ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಮೇಲ್ಮನವಿ  ಅರ್ಜಿಯನ್ನು ವಿಚಾರಣೆಗೆ ಹೈಕೋರ್ಟ್ ಸ್ವೀಕರಿಸಿದೆ.

ಇಂದು ಹೈಕೋರ್ಟ್ ವಿಭಾಗಿಯ ಪೀಠದಲ್ಲಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ ಮೇಲ್ಮನವಿಯ ಅರ್ಜಿ ವಿಚಾರಣೆ ನಡೆಯಿತು. ವಿಚಾರಣಾ ನ್ಯಾಯಾಲಯದ ದಾಖಲೆ ಹಾಜರುಪಡಿಸಲು ಹೈಕೋರ್ಟ್ ಸೂಚಿಸಿತು.ವಿನಯ್ ಕುಲಕರ್ಣಿ ಮೇಲ್ಮನವಿ ಅರ್ಜಿ ವಿಚಾರಣೆಗೆ ಸ್ವೀಕರಿಸಿದ ಹೈಕೋರ್ಟ್ high court

680 ಪುಟಗಳ ತೀರ್ಪು ಇರುವುದರಿಂದ ಆಕ್ಷೇಪಣೆ ಸಮಯಕ್ಕೆ ಸಿಬಿಐ ಮನವಿ ಮಾಡಿತು. ಇದೆ ವೇಳೆ ವಿನಯ್ ಕುಲಕರ್ಣಿ ಪರ ವಕೀಲರು ಸಹ ರಜಾ ಕಾಲದ ಪೀಠದಲ್ಲಿ ವಿಚಾರಣೆಗೆ ಅನುಮತಿ ನೀಡಲು ಮನವಿ ಮಾಡಿದರು. ರಜಾಕಾಲದ ಪೀಠದಲ್ಲಿ ಅಹವಾಲು ಮಂಡಿಸಲು ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿದಾರರಿಗೆ ಅವಕಾಶ ನೀಡಿತು. ಬಳಿಕ ಏಪ್ರಿಲ್ 30ರಂದು ವಿಚಾರಣೆಗೆ ವಿನಯ್ ಕುಲಕರ್ಣಿ ಪರ ವಕೀಲರು ಜಡ್ಜ್ ಗೆ ಮನವಿ ಮಾಡಿದರು.

Key words: High Court, accepts, Vinay Kulkarni, appeal, hearing