ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ.

ಬೆಂಗಳೂರು,ಮಾರ್ಚ್,25,2022(www.justkannada.in):  ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಜಮಾನ್ ಉಸ್ಮಾನ್ (44) ಬಂಧಿತ ಆರೋಪಿ.  ಜಮಾನ್ ಉಸ್ಮಾನ್ ನನ್ನು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿ  ಬೆಂಗಳೂರಿಗೆ ಕರೆತಂದಿದ್ದು, ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ಮಧ್ಯೆ  ಉಸ್ಮಾನ್ ನನ್ನು  8 ದಿನಗಳ ಕಾಲ  ಪೊಲೀಸ್  ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ganja peddlers arrested by mysore police

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ರೆಹಮತ ಉಲ್ಲಾ ಸೇರಿ ಇಬ್ಬರನ್ನ ಪೊಲೀಸರು ಬಂಧಿಸಿದ್ದರು.  ಬಂಧಿತರು ತಮಿಳುನಾಡಿನ ತೌಹೀದ್ ಜಮಾತ್ ಸದಸ್ಯನಾಗಿದ್ದರು.

Key words:  High Court- judge-threatening-case-arrest