ಮಂತ್ರಿಯಾಗುವ ಕನಸು ಕಂಡಿದ್ದ ಹಳ್ಳಿಹಕ್ಕಿಗೆ ಶಾಕ್: ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹ ಎಂದ ಹೈಕೋರ್ಟ್…

ಬೆಂಗಳೂರು,ನವೆಂಬರ್,30,2020(www.justkannada.in):  ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗಬೇಕು ಎಂದು ಕನಸು ಕಂಡಿದ್ದ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಅವರಿಗೆ ಹೈಕೋರ್ಟ್ ಶಾಕ್ ನೀಡಿದೆ.logo-justkannada-mysore

ಸಂವಿಧಾನದ ಆರ್ಟಿಕಲ್ 164 (1B), 361 B ಅಡಿ ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ಹೈಕೋರ್ಟ್ ಸಿಜೆ ಎ.ಎಸ್ ಓಕಾ, ಎಸ್.ವಿಶ್ವಜಿತ್ ಶೆಟ್ಟಿ  ನೇತೃತ್ವದ ವಿಭಾಗೀಯ ಪೀಠ ಮಧ್ಯಂತರ ಆದೇಶ ನೀಡಿದೆ. ಈ ಮೂಲಕ ಸಚಿವರಾಗುವ ಹಂಬಲದಲ್ಲಿದ್ದ ಎ.ಹೆಚ್.ವಿಶ್ವನಾಥ್ ಗೆ ಹಿನ್ನಡೆಯಾಗಿದೆ.

ರಾಜ್ಯಪಾಲರು ಸಂವಿಧಾನ ಬದ್ಧವಾಗಿ ಸಚಿವರನ್ನ ನೇಮಿಸಬೇಕು. ಮುಖ್ಯಮಂತ್ರಿ ಕೂಡ ಸಂವಿಧಾನದಡಿ ನೇಮಕಗೊಳ್ಳುತ್ತಾರೆ.  ಹೆಚ್.ವಿಶ್ವನಾಥ್ ಶಿಫಾರಸ್ಸಿಗೆ ಮುನ್ನ ಅನರ್ಹತೆಯನ್ನ ಸಿಎಂ ಪರಿಗಣಿಸಬೇಕು ಎಂದು  ಹೈಕೋರ್ಟ್ ವಿಭಾಗೀಯ ಪೀಠ ತಿಳಿಸಿದೆ.

ಆರ್.ಶಂಕರ್, ಎಂಟಿಬಿ ನಾಗರಾಜ್ ಗೆ ಬಿಗ್ ರಿಲೀಫ್ …

ಹಾಗೆಯೇ  ಪರಿಷತ್ ಸದಸ್ಯರಾದ ಆರ್.ಶಂಕರ್, ಎಂಟಿಬಿ ನಾಗರಾಜ್ ಗೆ  ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸಂವಿಧಾನದಡಿ ಮರು ಆಯ್ಕೆಯಾಗಿರುವುದರಿಂದ ಇಬ್ಬರಿಗೂ ಅನರ್ಹತೆಯಿಲ್ಲ ನ್ಯಾಯಾಲಯ ಆದೇಶ ಹೊರಡಿಸಿದೆ.High Court -H. Vishwanath - unfit - minister.

ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್  ಎಲೆಕ್ಷನ್ ನಲ್ಲಿ ಗೆದ್ಧು  ಪರಿಷತ್ ಸದಸ್ಯರಾಗಿ ನೇಮಕವಾಗಿದ್ದಾರೆ. ಹೀಗಾಗಿ ಅವರಿಗೆ ಸಚಿವರಾಗಲು ಯಾವುದೇ ಅಡೆತಡೆಯಿಲ್ಲ. ಆದ್ರೇ ಹೆಚ್.ವಿಶ್ವನಾಥ್ ಅನರ್ಹಗೊಂಡು ಬಳಿಕ ನಾಮನಿರ್ದೇಶಿತರಾಗಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡೋದಕ್ಕೆ ಅನರ್ಹರಾಗಿದ್ದಾರೆ ಎಂಬುದಾಗಿ ಹೈಕೋರ್ಟ್ ವಿಭಾಗೀಯ ಪೀಠವು ಅಭಿಪ್ರಾಯ ಪಟ್ಟಿದೆ. ಈ ಮೂಲಕ ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ಗೆ ಬಿಗ್ ಶಾಕ್ ನೀಡಿದ್ದರೇ, ಆರ್ ಶಂಕರ್, ಎಂಟಿಬಿ ನಾಗರಾಜ್ ಗೆ ಬಿಗ್ ರಿಲೀಫ್ ನೀಡಿದೆ.

Key words: High Court -H. Vishwanath – unfit – minister.