Monday, September 14, 2026

BDA Apartments

ಡಿಸಿಎಂ ಡಾ.ಜಿ. ಪರಮೇಶ್ವರ್ ಗೆ ತಾತ್ಕಾಲಿಕ ರಿಲೀಫ್… BDA JK_Adv BDA Adv
Home Front Page  ಡಿಸಿಎಂ ಡಾ.ಜಿ. ಪರಮೇಶ್ವರ್ ಗೆ ತಾತ್ಕಾಲಿಕ ರಿಲೀಫ್…

 ಡಿಸಿಎಂ ಡಾ.ಜಿ. ಪರಮೇಶ್ವರ್ ಗೆ ತಾತ್ಕಾಲಿಕ ರಿಲೀಫ್…

ಬೆಂಗಳೂರು,ಮೇ,30,2019(www.justkannada.in): ಜಮಖಂಡಿ ಉಪಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಡಿಸಿಎಂ ಪರಮೇಶ್ವರ್ ಗೆ ಕೋರ್ಟ್ ನೀಡಿದ್ದ ಸಮನ್ಸ್ ಗೆ  ರಾಜ್ಯ ಹೈಕೋರ್ಟ್ ಮಧ್ಯಾಂತರ ತಡೆ ನೀಡಿದೆ.

ಈ ಮೂಲಕ ಡಿಸಿಎಂ ಪರಮೇಶ್ವರ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಜಮಖಂಡಿ ಉಪಚುನಾವಣೆ ವೇಳೆ ಡಿಸಿಎಂ ಪರಮೇಶ್ವರ್,  ಮತದಾರರನ್ನ ಉದ್ದೇಶಿಸಿ ಮಾತನಾಡುತ್ತಿದ್ದ  ಸಂದರ್ಭದಲ್ಲಿ  ಮತ ನೀಡಿದರೇ ರಸ್ತೆ ಅಭಿವೃದ್ದಿ ಎಂದು ಭರವಸೆ ನೀಡಿದ್ದರು. ಈ ಸಂಬಂಧ ಚುನಾವಣಾಧಿಕಾರಿಗಳು ಡಿಸಿಎಂ ಪರಮೇಶ್ವರ್ ವಿರುದ್ದ ಕೇಸ್ ದಾಖಲಿಸಿದ್ದರು.

ಈ ನಡುವೆ ತಮಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದ ಹಿನ್ನೆಲೆ ಸಮನ್ಸ್ ಪ್ರಶ್ನಿಸಿ ಡಿಸಿಎಂ ಪರಮೇಶ್ವರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್  ಸಮನ್ಸ್ ಗೆ ಮಧ್ಯಂತರ ತಡೆ ನೀಡಿ ವಿಚಾರಣೆಯನ್ನ ಜುಲೈ 4ಕ್ಕೆ ಮುಂದೂಡಿದೆ. ಪ್ರಕರಣ ಸಂಬಂಧ ಡಿಸಿಎಂ ಪರಮೇಶ್ವರ್ ನಾಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಹಾಜರಾಗಬೇಕಿತ್ತು.

Key words. The High Court  give  temporary relief to DCM Parameshwar