Saturday, August 15, 2026

BDA Apartments

Home Front Page ಮೂವರು ಡಿಸಿಎಂ ನೇಮಕ ಬಗ್ಗೆ ಹೈಕಮಾಂಡ್ ತೀರ್ಮಾನ- ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಮೂವರು ಡಿಸಿಎಂ ನೇಮಕ ಬಗ್ಗೆ ಹೈಕಮಾಂಡ್ ತೀರ್ಮಾನ- ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಬೆಂಗಳೂರು,ಜನವರಿ,6,2024(www.justkannada.in):  ರಾಜ್ಯದಲ್ಲಿ ಮತ್ತೆ ಮೂವರು ಡಿಸಿಎಂಗಳ ನೇಮಕ ವಿಚಾರ  ಚರ್ಚೆಯಾಗುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ.ಪರಮೇಶ್ವರ್, ಡಿಸಿಎಂ ನೇಮಕ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪರಮೇಶ್ವರ್,  ಕೆಎನ್ ರಾಜಣ್ಣ ಹೇಳಿಕೆ ಕೊಡ್ತಿರ್ತಾರೆ. ಅದು ಅವರ ಅಭಿಪ್ರಾಯ.  ನನ್ನ ಅಭಿಪ್ರಾಯ ಹೈಕಮಾಂಡ್ ಅಭಿಪ್ರಾಯ ಎರಡು ಒಂದೇ.  ಮೂರು ಡಿಸಿಎಂ ಹುದ್ದೆ ಬಗ್ಗೆ ಯಾರು ಎಲ್ಲಿ ಚರ್ಚೆ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆಗೂ ಮುನ್ನ 3 ಡಿಸಿಎಂ ಹುದ್ದೆ ಸೃಷ್ಟಿ ಮಾಡಲಿ ಎಂಬ ಸಲಹೆಯನ್ನು ನೀಡಿದ್ದಾರೆ. ಆದರೆ ಹೈಕಮಾಂಡ್ ದೃಷ್ಟಿಕೋನ ಏನು ಅನ್ನೋದು ಗೊತ್ತಿಲ್ಲ.ಮೂವರನ್ನು ಡಿಸಿಎಂ ಮಾಡಿದರೆ ಲೋಕಸಭೆ ಚುನಾವಣೆಯನ್ನು ಗೆಲ್ಲಬಹುದು ಇದು ಹೈಕಮಾಂಡ್ ಗಮನದಲ್ಲಿದ್ದರೆ ಅವರು ಮಾಡೇ ಮಾಡುತ್ತಾರೆ  ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Key words: High Command- decision – three DCMs – Home Minister -Dr. G. Parameshwar.