ಅವನೊಬ್ಬ ಥರ್ಡ್ ಕ್ಲಾಸ್,  ಅನ್ ಫಿಟ್- ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿ….

ಹಾಸನ,ಡಿಸೆಂಬರ್,21,2020(www.justkannada.in): ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು ಈ ನಡುವೆ ರಾಜಕೀಯ ದೃವೀಕರಣ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ವಿರುದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿಕಾರಿದ್ದಾರೆ.Teachers,solve,problems,Government,bound,Minister,R.Ashok

ಹಾಸನದಲ್ಲಿ ಇಂದು  ಮಾತನಾಡಿದ ಹೆಚ್.ಡಿ. ರೇವಣ್ಣ, ಗ್ರಾಮ ಪಂಚಾಯ್ತಿ ಚುನಾವಣೆ ಹೊಸ್ತಿಲಲ್ಲಿ ಈ ರೀತಿಯಾಗಿ ಅರವಿಂದ ಲಿಂಬಾವಳಿ ಸುಳ್ಳು ಹೇಳುವುದು ಸರಿಯಲ್ಲ. ಅರವಿಂದ ಲಿಂಬಾವಳಿ ಒಬ್ಬ ಥರ್ಡ್ ಕ್ಲಾಸ್. ಉಪಾಧ್ಯಕ್ಷನಾಗಲು ಅನ್ ಫಿಟ್ ಇಂತವರಿಂದಲೇ ಬಿಜೆಪಿ ಮರ್ಯಾದೆ ಕಳೆದುಕೊಳ್ಳುತ್ತಿದೆ. ಇಂತಹ ಸುಳ್ಳು ಪ್ರಚಾರಗಳನ್ನು ಮಾಡುವುದು ಸರಿಯಲ್ಲ ಎಂದಿದ್ದಾರೆ.

ಇನ್ನು ಬಿಜೆಪಿ- ಜೆಡಿಎಸ್ ವಿಲೀನ ಮಾತೇ ಇಲ್ಲ.  ಬಿಜೆಪಿ ಜೊತೆ ಜೆಡಿಎಸ್ ಒಪ್ಪಂದ ಮಾಡಿಕೊಂಡಿಲ್ಲ. ನಾವು ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲ್ಲ  ಎಂದು ಹೆಚ್.ಡಿ ರೇವಣ್ಣ ತಿಳಿಸಿದ್ದಾರೆ.

Key words: He’s-  third-class- un-fit-hassan-Former Minister- HD Revanna